sunil-deodhar

ಹೊಸದಿಲ್ಲಿ: “ತ್ರಿಪುರಾ ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ  ಗೋಮಾಂಸ ನಿಷೇಧಿಸಲ್ಲ” ಹೀಗೆಂದು ಹೇಳಿದವರು  ಬಿಜೆಪಿ ಮುಖಂಡ ಸುನೀಲ್ ದೇವಧರ್ ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು  ಖಾಸಗಿ ಸುದ್ದಿ ಸಂಸ್ಥೆಗೆ ಮಂಗಳವಾರ ತಿಳಿಸಿದ್ದಾರೆ.

ತ್ರಿಪುರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರಿದ್ದಾರೆ. ತ್ರಿಪುರಾದಲ್ಲಿರುವ ಹೆಚ್ಚಿನ ಜನರು ಗೋ ಮಾಂಸ ಸೇವಿಸುತ್ತಿರುವ ಹಿನ್ನೆಲೆಯಲ್ಲಿ ಗೋ ಮಾಂಸ ಸೇವನೆಗೆ ನಿಷೇಧ ಹೇರುವುದಿಲ್ಲ.ಕೆಲವು ಮಂದಿ ಹಿಂದೂಗಳು ಗೋ ಮಾಂಸ ಸೇವಿಸುತ್ತಾರೆ. ಗೋ ಸೇವನೆಗೆ ನಿಷೇಧ ಹೇರಬಾರದು ಎನ್ನುವುದು ನನ್ನ ಅನಿಸಿಕೆೆ’’ ಎಂದು ದೇವಧರ್ ಹೇಳಿದ್ದಾರೆ.

ಮಹಾರಾಷ್ಟ್ರದ ಸುನೀಲ್ ದೇವಧರ್ ಇತ್ತೀಚೆಗೆ ತ್ರಿಪುರಾದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದಾರೆ. ‘‘ಒಂದು ನಿರ್ದಿಷ್ಟ ರಾಜ್ಯದಲ್ಲಿ ಬೀಫ್ ಬ್ಯಾನ್ ಮಾಡುವ ಮೊದಲು ರಾಜ್ಯದ ಬಹುಸಂಖ್ಯಾತರ ಆದ್ಯತೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ಜನರ ಭಾವನೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ’’ ಎಂದು ದೇವಧರ ಹೇಳಿದ್ದಾರೆ.

By Suddi9

Leave a Reply

Your email address will not be published. Required fields are marked *