Published On: Mon, Mar 12th, 2018

ಎಸ್‍ಡಿಪಿಐ ತಲಪಾಡಿ ವಲಯದ ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ

ಉಳ್ಳಾಲ: ಭಯಮುಕ್ತ ಮತ್ತು ಹಸಿವುಮುಕ್ತ ಭಾರತ ಕಟ್ಟಬೇಕಾಗಿದೆ. ಮಾನವೀಯತೆಯ ಸೇವೆ ಒದಗಿಸಬೇಕಿದೆ . ಭಾರತದ ಸಂಸ್ಕೃ ತಿಯಾದ ಗಂಗಾ, ಜಮುನಾ, ತಹಬೀಝ್ ಒಡೆಯಲು ಯಾವುದೇ ಚಡ್ಡಿ ಪ್ಯಾಂಟಿನವರು ಬಂದರೂ ಬಿಡಬಾರದು ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದ್ದಾರೆ. ಅವರು ಎಸ್‍ಡಿಪಿಐ ತಲಪಾಡಿ ವಲಯದ ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.sdpi talapady 01

70 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರಕಾರಗಳು ದಲಿತರನ್ನು, ಮುಸ್ಲಿಮರನ್ನು ಗುಲಾಮರಂತೆ ನೋಡುತ್ತಿದೆ. ಆದರೆ ಗುಲಾಮಗಿರಿಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ ಅನ್ನುವುದನ್ನು ಮನವರಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಪಡೆದಲ್ಲಿ ಯಾರಿಗೂ ತಲೆಬಾಗದೆ ತಮ್ಮ ಹಕ್ಕನ್ನು ತಾವು ಕೇಳಬಹುದು. ಇದಕ್ಕಾಗಿ ಎಸ್ ಡಿಪಿಐ ವೇದಿಕೆಯನ್ನು ಕಲ್ಪಿಸುತ್ತಿದೆ. ಸರಕಾರಗಳು ವೋಟಿಗಾಗಿ ಜಯಂತಿಯನ್ನು ಆಚರಣೆ ಮಾಡಲು ಮುಂದಾಗುತ್ತಿದ್ದಾರೆ.12

ಆದರೆ ಜನ ಟಿಪ್ಪು ಕುರಿತ ಆದರ್ಶಗಳನ್ನು ಸ್ಮರಿಸಬೇಕಿದೆ. ಕಚೇರಿಯಲ್ಲಿ ಯಾವುದೇ ಪಕ್ಷದವರಿಗೆ, ಜಾತಿಯವರಿಗೂ ಸೇವೆಯನ್ನು ಒದಗಿಸಬೇಕಾಗಿರುವುದು ಕರ್ತವ್ಯ. ಮೋದಿ, ಸಿದ್ಧರಾಮಯ್ಯ, ರಾಹುಲ್ ಗಾಂಧಿ ಮೂಲಕ ಪಕ್ಷದ ನೋಂದಾವಣೆಯನ್ನು ಮಾಡಿಕೊಂಡಿಲ್ಲ. ಸಾಂವಿಧಾನಿಕವಾಗಿ ಪಕ್ಷದ ನೋಂದಾವಣೆಯನ್ನು ಚುನಾವಣೆ ಆಯೋಗದಲ್ಲಿ ನಡೆಸಿದ್ದೇವೆ. ಯಾರಿಗೂ ಹೆದರಬೇಕಾದ ಅವಶ್ಯಕತೆಯಿಲ್ಲ. ಎಲ್ಲದಕ್ಕೂ ಕಾನೂನು ಹೋರಾಟದ ಮೂಲಕ ಜಯಿಸಬಹುದು. ಮುಂದೆ ಗ್ರಾ.ಪಂ, ತಾ.ಪಂ, ವಿಧಾನಸಭೆ, ಲೋಕಸಭೆಗೆ ಕಾರ್ಯಕರ್ತರು ಆಯ್ಕೆಗೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲರೂ ಸಿದ್ಧರಾಗಬೇಕಿದೆ ಎಂದರು.

ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ , ಎಸ್‍ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅತಾವುಲ್ಲ ಜೋಕಟ್ಟೆ, ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಎಸ್‍ಡಿಎಯು ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ, ಪಿಎಫ್‍ಐ ದ.ಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಎಸ್‍ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಸಮಾಜ ಸೇವಕರಾದ ಅಬ್ಬಾಸ್ ಉಚ್ಚಿಲ್, ಬಶೀರ್ ಅಜ್ಜಿನಡ್ಕ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಈ ಸಂದರ್ಭ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್‍ರವರನ್ನು ಎಸ್‍ಡಿಪಿಐ ತಲಪಾಡಿ ವಲಯದ ವತಿಯಿಂದ ಸನ್ಮಾನಿಸಲಯಿತು.
ಎಸ್‍ಡಿಪಿಐ ತಲಪಾಡಿ ವಲಯಾಧ್ಯಕ್ಷ ಇಬ್ರಾಹೀಂ ಯು.ಎಂ ಸ್ವಾಗತಿಸಿದರು. ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಇರ್ಷಾದ್ ಅಜ್ಜಿನಡ್ಕ ವಂದಿಸಿದರು. ಝಾಹೀದ್ ಮಲಾರ್ ಕಾರ್ಯಕ್ರಮ ನಿರೂಪಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter