ಹಾಸನ: ಆಟೊ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ಅರಸೀಕೆರೆ ನಗರದಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ (36),ಸಂತೋಷ (38) ಹಾಗೂ ಗಾಯಾಳುಗಳನ್ನು ಹಷ೯ ವಿನಯ್ ಎಂದು ಗುರುತಿಸಲಾಗಿದೆ.
ಹಳಕಲ್ಲನಾಯಕನಹಳ್ಳಿ ಗ್ರಾಮದ ಮಂಜುನಾಥ್ ಆಟೊದಲ್ಲಿ ಸಂಬಂಧಿಕರ ಮನೆಗೆ ಹೋಗಿ ವಾಪಸು ಬರುವಾಗ ಎಪಿಎಂಸಿ ಮಾರುಕಟ್ಟೆ ಹತ್ತಿರ ಬಸ್ ಢಿಕ್ಕಿಹೊಡೆದು ಈ ಅವಘಾಡ ಸಂಭವಿಸಿದೆ.
ಸುಧ್ದಿ ತಿಳಿದ ಅರಸೀಕೆರೆ ನಗರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

