ಗಲ್ಫ್ ಕಮಿಟಿ ಅಡ್ಡೂರು ಬುರೈದಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ
ಬುರೈದಾ: ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಗಲ್ಫ್ ಕಮಿಟಿ ಅಡ್ಡೂರು ಇದರ ಬುರೈದಾ ಘಟಕದ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಎ.ಕೆ.ಅಬ್ದುಲ್ ರಝಾಕ್ ಅಧ್ಯಕ್ಷತೆಯಲ್ಲಿ ಇಲ್ಲಿನ ಎ.ಪಿ. ರೂಮಿನಲ್ಲಿ ನಡೆಯಿತು.
ಬಳಿಕ ಮಾತನಾಡಿದ ಅವರು, ಮುಂದೆಯೂ ನಮ್ಮ ಕಮಿಟಿಯಿಂದ ಸಮಾಜಸೇವೆಯೊಂದಿಗೆ ದೀನೀ ಸೇವೆ ಮಾಡಲು ಅಲ್ಲಾಹನು ಕರುಣಿಸಲಿ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಎಂ.ನಿಸಾರ್ ವಾರ್ಷಿಕ ವರದಿ ಮಂಡಿಸಿದರು.
ಈ ವೇಳೆ 2018-2019ನೇ ಸಾಲಿನ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಎ.ಕೆ.ಅಬ್ದುಲ್ ರಝಾಕ್, ಉಪಾಧ್ಯಕ್ಷರಾಗಿ ಡಿ.ಎಸ್. ಅಶ್ರಫ್ ಹಾಗೂ ಎ.ಎಂ. ನವಾಝ್, ಪ್ರಧಾನ ಕಾರ್ಯದರ್ಶಿಯಾಗಿ ತಸ್ಲೀಮ್, ಜತೆ ಕಾರ್ಯದರ್ಶಿಯಾಗಿ ಎ.ಎಂ. ನಿಸಾರ್, ಗೌರವಾಧ್ಯಕ್ಷರಾಗಿ ಎ.ಕೆ.ಅಬ್ದುಲ್ ಖಾದರ್, ಖಜಾಂಜಿಯಾಗಿ ಎ.ಪಿ.ರಮ್ಲಾನ್, ಲೆಕ್ಕ ಪರಿಶೋಧಕರಾಗಿ ಎ.ಪಿ.ಶರೀಫ್ ಅವರನ್ನು ಆಯ್ಕೆ ಮಾಡಲಾಯಿತು.