ಗಲ್ಫ್ ಕಮಿಟಿ ಅಡ್ಡೂರು ಅಲ್ ಹಸ್ಸ ಘಟಕದ ‘ವಾರ್ಷಿಕ ಮಹಾ ಸಭೆ’
ಗಲ್ಫ್ ನ್ಯೂಸ್: ಗಲ್ಫ್ ಕಮಿಟಿ ಅಡ್ಡೂರು ಇದರ ಅಲ್ ಹಸ್ಸ ಘಟಕದ ವಾರ್ಷಿಕ ಮಹಾ ಸಭೆ ಅಲ್ ಹಸ್ಸ ಅಧ್ಯಕ್ಷ ಝೈನುದ್ದೀನ್ ಅಧ್ಯಕ್ಷತೆಯಲ್ಲಿ ಸೋಮವಾರ ಮಝುರೊ ಹಾಲ್ ನಲ್ಲಿ ನಡೆಯಿತು.
ಈ ವೇಳೆ ಗಲ್ಫ್ ಕಮಿಟಿ ಅಡ್ಡೂರು ಅಲ್ ಹಸ್ಸ ಘಟಕದ 2018-2019ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಶರೀಫ್ ಗೋಳಿಪಡ್ಪು, ಉಪಾಧ್ಯಕ್ಷರಾಗಿ ಇಲ್ಯಾಸ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಟಿಬೆಟ್, ಕಾರ್ಯದರ್ಶಿಯಾಗಿ ಹಫೀಝ್ ಅಡ್ಡೂರು, ಗೌರವಾಧ್ಯಕ್ಷರಾಗಿ ಉಮರುಲ್ ಫಾರೂಕ್, ಖಜಾಂಜಿಯಾಗಿ ಶರೀಫ್ ಕಟ್ಟಪುಣಿ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಹಮೀದ್ ಟಿಬೆಟ್ ಹಾಗೂ ಕಮಿಟಿಯ ಉಸ್ತುವಾರಿ ಸಚಿವರಾಗಿ ಝೈನುದ್ದೀನ್ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಇಲ್ಯಾಸ್ ವಾರ್ಷಿಕ ವರದಿ ಮಂಡಿಸಿದರು.