ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನೂತನ ಧ್ವಜಸ್ತಂಭದ (ಕೊಡಿಮರದ)ಕೆತ್ತನೆಯ ಕೆಲಸಕ್ಕೆ ಭಾನುವಾರ 12.45ರ ಮೂಹೂರ್ತದಲ್ಲಿ ನೆರವೇರಿತು.
ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ದೇವಳದ ಅರ್ಚಕರಾದ ಮಾಧವ ಭಟ್, ಕೆ.ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಮಾಧವಮಯ್ಯ,ವಿಷ್ಣುಮೂರ್ತಿನಟ್ಟೋಜ ಪೂಜೆಯಲ್ಲಿ ಸಹಕರಿಸಿದರು.ಶಿಲ್ಪಿ ಮಹೇಶ್ ಮುನಿಯಂಗಳ್ ಅವರ ಉಪಸ್ಥಿತಿಯಲ್ಲಿ ಮರದ ಕೆತ್ತನೆಯ ಕೆಲಸಕ್ಕೆ ಹರೆಕಳ ಪಾವೂರು ದಾರುಶಿಲ್ಪಿ ಬಿ. ಬಾಲಕೃಷ್ಣ ಆಚಾರ್ಯ ಮೂಹೂರ್ತ ಮಾಡಿದರು.
ಈ ಸಂದರ್ಭದಲ್ಲಿದೇವಳದ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಯು. ತಾರನಾಥ ಆಳ್ವ, ಕೃಷ್ಣರಾಜ್ ಮಾರ್ಲ,ಕೃಷ್ಣಕುಮಾರ್ ಪೂಂಜ ಹಾಗೂ ಬಿಲ್ಲವ ಕೊಡಿಮರ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯನ್ ಪಚಿನಡ್ಕ, ಗೌರವಧ್ಯಕ್ಷ ರಾಮ್‍ದಾಸ್ ಕೋಟ್ಯಾನ್ ಮಜಿಲಗುತ್ತು,ಗಂಗಾಧರ ಪೂಜಾರಿ ಕೊಪ್ಪಲ, ಪುರುಷ ಸಾಲಿಯಾನ್, ಶೇಖರ ಬಳ್ಳಿ ಕೈಕಂಬ, ಗೋಪಾಲಕೃಷ್ಣ ಕೈಕಂಬ, ದೋಗು ಪೂಜಾರಿ, ಭುವನೇಶ್ ಪಚಿನಡ್ಕ, ಯಶವಂತಪೂಜಾರಿ, ನಾರಾಯಣ ಪೂಜಾರಿ, ಲೋಕೇಶ್ ಭರಣಿ,ಸದಾಶಿವ ಕರ್ಕೇರಾ, ಗಣೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
