ಬಂಟ್ವಾಳ: ಇತ್ತೀಚೆಗೆ ತಾಲೂಕಿನ ಬಿ.ಸಿ.ರೋಡ್ ಉದ್ಯಾನವನದ ಬಳಿ ಸ್ಪರ್ಶಾ ಕಲಾಮಂದಿರದಲ್ಲಿ ಆಯೋಜಿಸಿದ್ದ ಭಾರತೀಯ ಜೈನ್ ಮಿಲನ್ ವಲಯ-8ರ ಮಂಗಳೂರು ವಿಭಾಗದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ “ಕ್ರೀಡೋತ್ಸವ”ವನ್ನು ಮಹಾವೀರ ಇಂಡಸ್ಟ್ರೀಯ ಮಾಲಕ ಮಹಾ ಪದ್ಮಪ್ರಸಾದ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೀರ್ ಬಿೃಜೇಶ್ ಅಧ್ಯಕ್ಷತೆವಹಿಸಿದ್ದು, ಮಿಲನ್ ವಲಯ-8 ರ ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್, ವಲಯ ನಿರ್ದೇಶಕ ಸುದರ್ಶನ್ ಜೈನ್, ಕಾರ್ಯದರ್ಶಿ ಗೀತಾ ಜಿನಚಂದ್ರ, ಕೋಶಾಧಿಕಾರಿ ಚಂದ್ರಕಾಂತ್ ಜೈನ್, ಕ್ರೀಡಾ ಕಾರ್ಯದರ್ಶಿ ಧರಣೇಂದ್ರ ಜೈನ್, ಉಪಾಧ್ಯಕ್ಷರಾದ ಡಾ. ಸುದೀಪ್, ಹರ್ಷರಾಜ್ ಬಲ್ಲಾಳ್, ಹಿರಿಯರಾದ ಅರ್ಕಕೀರ್ತಿ ಇಂದ್ರ, ವಿಜಯಕುಮಾರಿ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ವೀರ್ ಆದಿರಾಜ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

