440351_1519143252-b

ಚೆನ್ನೈ: ಕೊಚ್ಚಾಡಿಯನ್ ಚಿತ್ರದ ಮಾರಾಟ ಹಕ್ಕು ವಿವಾದ ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬವನ್ನು ಇನ್ನೂ ಬಿಟ್ಟಿಲ್ಲ. 6.20 ಕೋಟಿ ರೂ. ಪಾವತಿಸುವಂತೆ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

12 ತಿಂಗಳೊಳಗೆ ಈ ಮೊತ್ತವನ್ನು ಜಾಹಿರಾತು ಕಂಪನಿಗೆ ನೀಡುವಂತೆ ಸುಪ್ರೀಂಕೋರ್ಟ್ ತಿಳಿಸಿದೆ.

ಕೊಚ್ಚಾಡಿಯನ್ ಚಿತ್ರದ ಮಾರಾಟದ ಹಕ್ಕಿಗೆ ಸಂಬಂಧಿಸಿದಂತೆ ಜಾಹೀರಾತು ಬ್ಯೂರೋ ಹಾಗೂ ಲತಾ ರಜನಿಕಾಂತ್ ಅವರ ನಡುವೆ 2016ರ ಹಿಂದಿನಿಂದಲೂ ವಿವಾದ ಏರ್ಪಟ್ಟಿದೆ.

ಕೊಚ್ಚಾಡಿಯನ್ ಸಿನಿಮಾದ ಪೋಸ್ಟ್ ನಿರ್ಮಾಣಕ್ಕಾಗಿ ತಮ್ಮ ಕಂಪನಿಯ ನೆರವು ಪೆಡೆದಿದ್ದು, 10 ಕೋಟಿ ರೂ. ಸಾಲದಿಂದ ಸಿನಿಮಾ ಪೂರ್ಣಗೊಳಿಸಲಾಗಿದೆ. ಆದರೆ, ಅಂತ್ಯದಲ್ಲಿ ತಮ್ಮ ಒಪ್ಪಿಗೆ ಇಲ್ಲದೆ ಬೇರೊಂದು ಕಂಪನಿಗೆ ಮಾರಾಟ ಮಾಡಲಾಗಿದೆ ಎಂದು ಜಾಹೀರಾತು ಕಂಪನಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಈ ಪ್ರಕರಣ ಸಂಬಂಧ 2016 ಜುಲೈ8 ರಂದು ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ರಜನಿಕಾಂತ್ ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶಿಸಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಸುಪ್ರಿಂಕೋರ್ಟ್ ರಜನಿ ಪತ್ನಿಗೆ ನೋಟಿಸ್ ಜಾರಿಗೊಳಿಸಿರುವುದು, ಸಾರ್ವಜನಿಕರಲ್ಲಿ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.

By Suddi9

Leave a Reply

Your email address will not be published. Required fields are marked *