ಬೆಂಗಳೂರು: ತನ್ನ ಪುತ್ರನಿಂದ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಶಾಸಕ ಹಾರಿಸ್ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ನಿಯಮ 69ರಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಬಳಿಕ ಎದ್ದು ನಿಂತ ಹಾರಿಸ್ , ಯುಬಿ ಸಿಟಿಯ ಹೊಟೇಲ್ ವೊಂದರಲ್ಲಿ ನಡೆದ ಘಟನೆ ಬಗ್ಗೆ ಮಾಹಿತ ಸಿಕ್ಕ ಬಳಿಕ ಬೈದು, ಹೊಡೆಯಲು ಹೋಗಿದ್ದೆ. ಆದರೆ ಆತ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾಗಿದ್ದ ಎಂದರು.
ತಾನೂ ಶಾಸಕನೂ ಹೌದು, ತಂದೆಯೂ ಹೌದು. ತಪ್ಪು ಮಾಡಿದ್ದಾನೆ ಎಂಬ ಕಾರಣಕ್ಕೆ ಮಗನನ್ನು ಮಗ ಅಲ್ಲ ಎನ್ನಲು ಸಾಧ್ಯವಿಲ್ಲ. ಹಾಗಂತ ತಾನೂ ಆತನನ್ನು ರಕ್ಷಣೆ ಮಾಡಲು ಸರಕಾರ, ಪೊಲೀಸರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಸ್ಪಷ್ಟಪಡಿಸಿದರು.
