ಕೈಕಂಬ:ಕಂದಾಯ ಸಚಿವರು ಬಂದರು ಬಡವರಿಗೆ ನೀಡಬೆಕಾಗಿದ್ದ ಹಕ್ಕು ಪತ್ರಗಳನ್ನು ನೀಡದೆ ಸರಕಾರ ಹಾಗೂ ಸ್ಥಳೀಯ ಶಾಸಕರು ಬಡವರನ್ನು ಅವಮಾನಿಸಿದೆ. ಹಕ್ಕು ಪತ್ರ ಪಡೆಯುವುದು ಬಡವರ ಹಕ್ಕು ಅದು ಬಿಕ್ಷ ಅಲ್ಲ, ಇನ್ನೊಂದು ವಾರದೊಳಗೆ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೋಟಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

16vpbjp manavi
ಹಕ್ಕು ಪತ್ರ ನೀಡಲು ಸತಾಯಿಸಿ ಅಧಿಕಾರ ದುರುಪಯೋಗ ಮಾಡಿದ್ದಾರೆಂದು ಆರೋಪಿಸಿ ಶಾಸಕರ ವಿರುದ್ಧ ಬಿಜೆಪಿ ವತಿಯಿಂದ ಶುಕ್ರವಾರ ಗುರುಪುರ ಕೈಕಂಬದ ಗಣೇಶ್ ಕಟ್ಟೆಯ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.3

94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ನೀಡುವ ಯೋಜನೆಯನ್ನು ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರಕಾರ ರೂಪಿಸಿದ ಯೋಜನೆಯಾಗಿತ್ತು ಅಂದು ರಾಜ್ಯಪಾಲರ ಮೂಲಕ ಯೋಜನೆ ಜಾರಿಯಾಗದಂತೆ ನೋಡಿಕೊಂಡ ಕಾಂಗ್ರೇಸ್ ಇಂದು ತನ್ನ ಯೋಜನೆಯೆಂದು ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆ ಎಂದು ಹೇಳುತ್ತಿದೆ. ಬಿಜೆಪಿ ಸರಕಾರ ಹಕ್ಕುಪತ್ರ ನೀಡಲು 750 ರೂ.ನಿಗದಿ ಮಾಡಿತ್ತು. ಬಳಿಕ ಬಂದ ಕಾಂಗ್ರೆಸ್ ಸರಕಾರ 10,000 ಸಾವಿರ ರೂ.ಗೆ ಏರಿಸಿ ಬಡವರನ್ನು ವಂಚಿಸಿದೆ ಎಂದು ದೂರಿದರು.5

ಜಿ.ಪಂ. ಸದಸ್ಯ ಜನಾರ್ಧನ ಗೌಡ ಮಾತನಾಡಿ, ಸರಕಾರದಿಂದ ದೊರೆಯುವ ಬಹುತೇಕ ಸೌಲಭ್ಯಗಳು ಶಾಸಕರ ಚೇಳಗಳಿಗೆ ನೀಡಲಾಗಿದೆ. ಅಲ್ಲದೆ, ಸೌಲಭ್ಯ ವಿತರಣೆಯಲ್ಲಿಯೂ ಸ್ವಜಾತಿಗೆ ಪ್ರೀತಿ ತೋರಿಸುತ್ತಿದ್ದಾರೆ. ಇವರ ಚೇಳಗಳು ಬಹುದೊಡ್ಡ ಭೂಹಗರಣದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲಾತಿ ಸಹಿತ ವರದಿ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದರು.13

6ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣ ಪಾಲೇಮಾರ್, ಬಿಜೆಪಿ ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಾ.ವೈ ಭರತ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಭುಜಂಗ ಕುಳಾಲ್, ನಾಗೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಬೊಂಡಂತಿಲ, ಅಮೃತ್ಲಾಲ್ ಡಿ,ಸೋಜ, ವಿನೋದ್‍ಮಾಡ, ಮಾಜಿ ತಾ. ಪಂ.ಸದಸ್ಯರಾದ ದೋಗು ಪೂಜಾರಿ, ಶಿವಪ್ಪ ಬಂಗೇರಾ, ,ಸಂತೋಷ್ ಮತ್ತಿತರರು ಭಾಗವಹಿಸಿದ್ದರು. ಶಿವರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.16-01

16-0003

16-001

2

By Suddi9

Leave a Reply

Your email address will not be published. Required fields are marked *