maxresdefault-68-770x430

ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಎಷ್ಟೋ ವಿಶೇಷ ಸ್ಥಾನವಿದೆ,ತುಳಸಿ ಇಲ್ಲದ ಮನೆ ಮನೆಯೇ ಅಲ್ಲ ಎಂದು ಶಾಸ್ತ್ರಗಳು ಹೇಳುತ್ತಿದೆ. ಈ ತುಳಸಿ ಗಿಡವನ್ನು ಎಷ್ಟೋ ಪವಿತ್ರವಾಗಿ ಪ್ರತಿದಿನ ಶ್ರದ್ದೆ, ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ. ಅಂತ ತುಳಸಿ ಗಿಡ ಕೆಲವು ಕಾರಣಗಳಿಂದ ಆಗಾಗ,ಅದರ ಸಹಜ ಬಣ್ಣ ಕಳೆದು ಹೋಗುವುದು,ಇಲ್ಲವಾದರೆ ಹೆಚ್ಚಾಗಿ ಎಳೆಗಳು ಉದುರುವುದು,ಹೀಗೆ ನೆಡೆಯುತ್ತಿರುತ್ತದೆ.

ತುಳಸಿ ಗಿಡದಲ್ಲಿ ಕಾಣುವ ಇಂತಹ ಬದಲಾವಣೆಯಿಂದ,ನಮ್ಮ ಮನೆಯ ಪರಿಸ್ಥಿತಿಯನ್ನು ನಾವು ಮೊದಲೇ ಗ್ರಹಿಸಬಹುದು,ಈಗ ಅದು ಏನು ಎಂಬುವುದನ್ನು ತಿಳಿಯೋಣ. ತುಳಸಿ ಗಿಡದ ಎಳೆಗಳು ಇದ್ದಕ್ಕಿದ್ದಂತೆ ಬಣ್ಣ ಬದಲಾದರೆ,ಆ ಮನೆಯಲ್ಲಿ ಯಾರಿಗೋ ಒಬ್ಬರಿಗೆ ತಾಂತ್ರಿಕ ಮಂತ್ರವನ್ನು ಪ್ರಯೋಗಿಸುತ್ತಾರೆ ಎಂದು ಅರ್ಥ. ನಾವು ಎಷ್ಟು ಜಾಗ್ರತೆಯಿಂದ ನೋಡಿಕೊಂಡರು,ಇದ್ದಕ್ಕಿದ್ದಂತೆ ತುಳಸಿ ಗಿಡ ಒಣಗಿ ಹೋದರೆ,ಆ ಮನೆಯ ಯಜಮಾನನಿಗೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಅರ್ಥ.

ತುಳಸಿ ಗಿಡ ಚೆನ್ನಾಗಿ ಹಸಿರಾಗಿ ಇದ್ದರೆ ಅದು ಶುಭದಾಯಕ,ಆ ಮನೆಯಲ್ಲಿ ಎಲ್ಲಾರಿಗೂ ಒಳ್ಳೆಯದು ಆಗುತ್ತದೆ. ಸಿರಿ,ಸಂಪತ್ತಿನಲ್ಲಿ ಯಾವ ಸಮಸ್ಯೆಗಳು ಬರುವುದಿಲ್ಲ. ತುಳಸಿ ಕಟ್ಟೆಯಲ್ಲಿ ಮತ್ತೊಂದು ತುಳಸಿ ಗಿಡ ಅದಾಗಿ ಅದೇ ಬಂದರೆ,ಆ ಮನೆಯಲ್ಲಿ ಯಾರಿಗೋ ಒಬ್ಬರಿಗೆ ವೃತ್ತಿ ಪರವಾಗಿ ಒಳ್ಳೆಯದು ಆಗುತ್ತದೆ ಎಂಬ ಸೂಚನೆ. ಒಂದು ವೇಳೆ ತುಳಸಿ ಗಿಡ ಯಾವುದೊ ಕಾರಣಗಳಿಂದ ಒಣಗಿ ಹೋದರೆ,ಅದು ಮತ್ತೆ ಬೆಳೆದು, ಹಸಿರು ಬಣ್ಣ ಆಗುವವರೆಗೂ ಅದನ್ನು ನೋಡಿಕೊಳ್ಳಬೇಕು. ಆದ್ದರಿಂದ ತುಳಸಿ ಗಿಡವನ್ನು ಪ್ರತಿದಿನ ಭಕ್ತಿ,ಶ್ರದ್ದೆಯಿಂದ ಚೆನ್ನಾಗಿ ಬೆಳಸಿದರೆ,ಆ ಮನೆಯಲ್ಲಿ ಎಲ್ಲರೂ ಸುಖ-ಶಾಂತಿಯಿಂದ ಇರುತ್ತಾರೆ.

By suddi9

Leave a Reply

Your email address will not be published. Required fields are marked *