ಬಂಟ್ವಾಳ: ಬಿಸಿಯೂಟ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ 8 ಹಾಗೂ 9 ರಂದು ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಬಂದ್ ಮಾಡಿ ಧರಣಿ ನಡೆಸಲಿದ್ದಾರೆ ಎಂದು ಸಿಐಟಿಯು ಬಂಟ್ವಾಳ ತಾಲೂಕು ಕಾರ್ಯದರ್ಶಿ ಎ.ರಾಮಣ್ಣ ವಿಟ್ಲ ತಿಳಿಸಿದ್ದಾರೆ.
ಬಿಸಿಯೂಟ ನೌಕರರು ಯಾವುದೇ ಭದ್ರತೆ ಹಾಗೂ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದು, ಈ ಬಗ್ಗೆ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ರಾಜ್ಯದ ಆಯಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಫೆ. 8 ಹಾಗೂ 9 ರಂದು ಧರಣಿ ನಡೆಸಲಾಗುವುದು ಎಂದ ಅವರು, ಅದೇ ರೀತಿ ಫೆ. 9 ರಂದು ಬಿ.ಸಿ. ರೋಡಿನ ಮಿನಿ ವಿಧಾನಸೌಧದ ಎದುರು ತಾಲೂಕಿನ ಎಲ್ಲಾ ನೌಕರರು ಬಿಸಿಯೂಟ ಬಂದ್ ಸ್ಥಗಿತಗೊಳಿಸಿ ಧರಣಿ ನಡೆಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

