pm-modi-in-rajyasabha

ಹೊಸದಿಲ್ಲಿ: ಕಾಂಗ್ರೆಸ್ ಮುಕ್ತ ಭಾರತ  ಕನಸು ಮಹಾತ್ಮ ಗಾಂಧಿ ಅವರದು. ಅದನ್ನು ನಾವು ನನಸು ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿ ಸುದೀರ್ಘವಾಗಿ ಮಾತನಾಡಿದರು.   ಸ್ವಾತಂತ್ರ್ಯ ಸಿಕ್ಕ ನಂತರ  ಮಹಾತ್ಮ ಗಾಂಧಿ ಅವರು  ಕಾಂಗ್ರೆಸ್ ವಿಸರ್ಜಿಸಲು ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನನಗೂ ಗಾಂಧೀಜಿ ಅವರ ಭಾರತ ಬೇಕು. ದೇಶ ಸ್ವತಂತ್ರವಾಗಿದೆ, ಕಾಂಗ್ರೆಸ್  ವಿಸರ್ಜಿಸಬೇಕು ಎಂದು ಗಾಂಧಿ  ಹೇಳಿದ್ದರು. ಆದರೆ ಈಗ ಕಾಂಗ್ರೆಸ್ಸಿಗರಿಗೆ ತುರ್ತು ಪರಿಸ್ಥಿತಿಯ ಭಾರತ, ಬೋಪೋರ್ಸ್ ಮತ್ತು ಕ್ಯಾಪ್ಟರ್ ಹಗರಣ ಬೇಕಾಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಆಡಳಿತಾವಧಿಯ ತಪ್ಪುಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ಏನಾಗಬೇಕಿತ್ತು, ಏನಾಯಿತು ಎಂಬುದನ್ನು ವಿವರಿಸುತ್ತಿರುವಾಗ  ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಬೆಂಬಲ ಸೂಚಿಸಿದರು.

ಪ್ರಧಾನಿ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರಲ್ಲದೇ, ಭಾಷಣವನ್ನು ಮೊಟಕುಗೊಳಿಸಲು ಸೂಚನೆ ನೀಡಿದ್ದು ಗಮನ ಸೆಳೆಯಿತು.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯ ಬಗ್ಗೆ  ಟೀಕೆ ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳ ಬಗ್ಗೆ ನಾನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಗೆ ಬದಲಾವಣೆಯೇ ಬೇಡವಾಗಿದೆ. ಬಿಜೆಪಿ ಹೊಸ ಭಾರತ ಕಟ್ಟಲು ಅಣಿಯಾಗಿದೆ.  ಕಾಂಗ್ರೆಸ್ ಗೆ  ಹಗರಣ, ತುರ್ತು ಪರಿಸ್ಥಿತಿ ಬೇಕಾಗಿದೆ ಎಂದು ಮೋದಿ ಟೀಕಾ ಪ್ರಹಾರ ನಡೆಸಿದರು.

By Suddi9

Leave a Reply

Your email address will not be published. Required fields are marked *