car-accident

ಮುಂಬೈ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಐವರು ಯುವಕರು ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಪಲ್‍ಘಢನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಮೃತರನ್ನು ತಾರಾಪುರ ನಿವಾಸಿ ನಿಲೇಶ್ ತಾಮೋರ್ (25),  ಸತ್‍ಪತಿ ನಿವಾಸಿ ದಿಪೇಶ್ ಪಗ್ದಾರೆ (24), ವಾದರೈ ನಿವಾಸಿ ಕಿರಣ್ ಪಗ್ದಾರೆ (30) ಪಲ್ ಘಡ್ ನಿವಾಸಿ ವಿರಾಜ್ ವೆಟಲ್ (25) ಹಾಗೂ ಖಂಪಡಾ ನಿವಾಸಿ ಸಂತೋಷ್ (37) ಎಂದು ಗುರುತಿಸಲಾಗಿದೆ.

ಈ ಐವರು ಗೆಳೆಯರು ಮದುವೆಗೆ ತೆರಳಿ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ರಸ್ತೆ ತಿರುವುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನ್ ಸಿನ್ಹಾ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಸತ್‍ಪತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *