ಮೂಡುಬಿದಿರೆ: 9ನೇ ಅಖಿಲ ಕರ್ನಾಟಲ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೊದಲ ಕಾರ್ಯಕ್ರಮ ಪ್ರತಿಭೋತ್ಸವ ರಾಜ್ಯದ ವಿವಿದೆಡೆಯ ಮಕ್ಕಳ ಸಮ್ಮಿಲನ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹೊಸತೊಂದು ದಾಖಲೆ ನಿರ್ಮಿಸಿತು.ಕರ್ನಾಟಕ ಪ್ರತಿಭೋತ್ಸವವನ್ನು ರಾಷ್ಟ್ರಪ್ರಶಸ್ತಿ ವಿಜೇತ ಬಾಲವಿಜ್ಞಾನಿ ಸ್ವಸ್ತಿಕ್ ಪದ್ಮ ಪುತ್ತೂರು ಕರ್ನಾಟಕ ಬಾಲ ಪ್ರತಿಭೋತ್ಸವನ್ನು ಉದ್ಘಾಟಿಸಿ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿ ಕೊಟ್ಟಿರುವುದು ಒಂದು ಉತ್ತಮ ಕೆಲಸ ಎಂದರು.ರಾಷ್ಟ್ರ ಮಟ್ಟದ ಅಯನಾ.ವಿ. ರಮರ್ಣ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ಕಲಾವಿದರಾದ ಪಂಚಮಿ ಮಾರೂರು, ಅದ್ವಿಕಾ ಶೆಟ್ಟಿ ಸುರತ್ಕಲ್, ಆರಾಧನಾ ನಿಡ್ಡೋಡಿ ಮೂಡುಬಿದಿರೆ, ತೇಜಸ್ ಆರ್ ಆಚಾರ್ಯ, ಶ್ರೀನಿಷಾ ಎಸ್. ರಾಜ್ ಭಂಡಾರಿ, ಅಥರ್ವ ಹೆಗ್ಡೆ ಕೆ., ಅಮೋಘ ಹೆಗ್ಡೆ, ಸುಜ್ಞಾನ್ ಎಸ್ ಪೂಜಾರಿ ಕಲ್ಲಬೆಟ್ಟು ಅತಿಥಿಗಳಾಗಿದ್ದರು.
ಕರ್ನಾಟಕ ಬಾಲ ಪ್ರತಿಭೋತ್ಸವದಲ್ಲಿ ಸ್ವಸ್ತಿಕ್ ಪದ್ಮ ಪುತ್ತೂರು, ಸೃಷ್ಠಿ ಆರ್ ಶೆಟ್ಟಿ, ಕಾರ್ಕಳ, ಐಶ್ವರ್ಯ ಬೆಂಗಳೂರು, ಅನನ್ಯ ಜೈನ್ ಬೆಳ್ತಂಗಡಿ, ಶ್ರದ್ಧಾ ಭಟ್ ನಾಯರ್‍ಪಳ್ಳ ಪೈವಳಿಕೆ, ವೃಂದಾ ಕೊನ್ನಾರ್, ಶಾರ್ವರಿ ಹುಬ್ಬಳ್ಳಿ, ವೀಕ್ಷಾ ನಾಯಕ್ ಕಟೀಲು, ಶ್ಲಾಘ ಸಾಲಿಗ್ರಾಮ, ಆರಾಧ್ಯ ಶೆಟ್ಟಿ ಕುಂದಾಪುರ, ಶೃತಿ ಡಿ ದಾಸ್ ಕಾವಳಕಟ್ಟೆ, ಅವನಿ ಉಪಾಧ್ಯಾ ಕಾರ್ಕಳ, ಶಮಾ ಪರ್ವಿನಾ ತಾಜ್ ಪುತ್ತೂರು, ಆಭಿನವಿ ಆರ್ ಹೊಳ್ಳ ಮಂಗಳೂರು, ಕೃತಿ ಉಚ್ಚಿಲ್ ಉಡುಪಿ, ಪ್ರಾಣ್ಯ ಪಿ.ರಾವ್, ಆಯುಷ್ ಜೆ ಶೆಟ್ಟಿ ಬೆಂಗಳೂರು, ಸೌರವ್ ಸಾಲ್ಯಾನ್ ಮಂಗಳೂರು, ಕುಶಾಲ್ ಗೌಡ ಬೆಂಗಳೂರು, ಆತೀಶ್ ಶೆಟ್ಟಿ ಮಂಗಳೂರು ,ತೀರ್ಥ ಪೊಳಲಿ ಅನುಷಾ ವಾಮಂಜೂರ್ ಕಾರ್ಯಕ್ರಮ ನೀಡಿ ಕರ್ನಾಟಕ ಪ್ರತಿಭಾ ಗೌರವ ಸ್ವೀಕರಿಸಿದರು.
ಕ್ಷಿತಿ ಕೆ. ರೈ ಧರ್ಮಸ್ಥಳ, ಪ್ರಥ್ವಿ ಶಿರೂರು ಹಾವೇರಿ, ದೀಕ್ಷಾ ಡಿ ರೈ ಪುತ್ತೂರು, ತುಷಾರ ಗೌಡ ಸುಳ್ಯ, ತನ್ಮಯ್ ಬೆಂಗಳೂರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಸಮ್ಮೇಳಾಧ್ಯಕ್ಷ ಬನ್ನಂಜೆ ಬಾಬು ಅಮೀನ್, ಅತಿಥಿಗಳಾದ ಕಡಂದಲೆ ಸುರೇಶ ಭಂಡಾರಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸತೀಶ ಶೆಟ್ಟಿ ಪಟ್ಲ, ಡಾ.ಸುಧೀರ್ ಹೆಗ್ಡೆ, ತಾರಾನಾಥ ಕಾಪಿಕಾಡ್ ಬಾಹುಬಲಿ ಪ್ರಸಾದ್ ಬಾಲಪ್ರತಿಭೆಗಳನ್ನು ಗೌರವಿಸಿದರು.
ಸಮ್ಮೇಳನದ ರೂವಾರಿ ಶೇಖರ ಅಜೆಕಾರು ಸ್ವಾಗತಿಸಿದರು. ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃಇತಿಕ ಕಾರ್ಯಕ್ರಮವನ್ನು ಅನನ್ಯ ಜೈನ್ ಬೆಳ್ತಂಗಡಿ ನಿರೂಪಿಸಿದರು.
