ವಿಟ್ಲ: ಸುಧೀರ್ಘ 38 ವರ್ಷಗಳ ಕಾಲ  ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಶಂಕರನಾರಾಯಣ ಭಟ್ ಪಟಿಕಲ್ಲು ಇವರಿಗೆ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.1 (2)

ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರೀಯುತರು ಆಡಂಬರದ ಬದುಕಿಗಿಂತ ಸರಳವಾದ ಬದುಕು ಉತ್ತಮ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದು, ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್ ಹಾಗೂ ಸದಸ್ಯರಾದ ಪದ್ಮಯ್ಯ ಗೌಡ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಲವಾರು ವಿದ್ಯಾರ್ಥಿಗಳು ನೆಚ್ಚಿನ ಉಪನ್ಯಾಸಕರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಕುಮಾರಿ ಜಯಶ್ರೀ ಹಾಗೂ ಕುಮಾರಿ ಚೈತ್ರರ ಪ್ರಾರ್ಥನೆಯೊಂದಿಗೆ ಆರಂಭಿಸಿ, ಸ್ವಸ್ತಿಕ್ ಸ್ವಾಗತಿಸಿ, ವಿಜಯಲಕ್ಶ್ಮಿ ವಂದಿಸಿದರು. ಕುಮಾರಿ ಜೀವಿತ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *