ಮಾಣಿಃ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.1 ನೇ ಗುರುವಾರ ಗೊನೆಕಡಿದು ಫೆ.5 ನೇ ಸೋಮವಾರ ರಾತ್ರಿ 10 ಗಂಟೆಗೆ ಭಂಡಾರಯೇರಿ ಫೆ.6 ನೇ ಮಂಗಳವಾರ ಬೆಳಿಗ್ಗೆ ಮೆಚ್ಚಿ ಜಾತ್ರೆ ನಡೆಯಲಿರುವುದು. ಸಂಜೆ 4 ಗಂಟೆಯಿಂದ ಶ್ರೀ ಗುಡ್ಡೆಚಾಮುಂಡಿ-ಪಂಜುರ್ಲಿ ದೈವಗಳ ನೇಮೋತ್ಸವ ಜರಗಲಿರುವುದು. ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಜಾತ್ರೆಯ ಸಲುವಾಗಿ ಫೆ.5 ನೇ ಸೋಮವಾರ ರಾತ್ರಿ ಗಂಟೆ 8 ರಿಂದ ಬಾಕಿಮಾರು ಗದ್ದೆಯಲ್ಲಿ ‘ಗೀತಸುರಭಿ’ ಬೆಂಗಳೂರು ಇವರಿಂದ ಸಂಗೀತ ರಸಮಂಜರಿ ಜರಗಲಿರುವುದು.
ಬೆಂಗಳೂರಿನ ಜನಪ್ರೀಯ ಚಲನಚಿತ್ರ ಹಿನ್ನೆಲೆ ಗಾಯಕ ಅಜಯಿ ವಾರಿಯರ್, ಜೋಗಿ ಸುನೀತಾ, ಸೀಮಾ ರಾಯಿಕರ್, ಸಚಿನ್ ಬೆಂಗಳೂರು, ಶ್ರೀಕಾಂತ್ ಕಾಮತ್, ವಿದ್ಯಾ ಹಾಗೂ ನಿರೂಪಕ ಜನಪ್ರೀಯ R.J. ಪ್ರಸನ್ನ ಮುಂತಾದ ಕಲಾವಿದರಿಂದ ಜನಪ್ರೀಯ ಚಲನಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ ಒಳಗೊಂಡ ‘ಗೀತಸುರಭಿ’ ಕಾರ್ಯಕ್ರಮ ನಡೆಯಲಿದೆ. ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನಗೊಳ್ಳಲಿದೆ ಎಂದು ಮಾಣಿಗುತ್ತು ಸಚಿನ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
