ಮುಂಬೈ: ಸ್ವದೇಶಿ ನಿರ್ಮಿತ ‘ಐಎನ್ಎಸ್ ಕೊಲ್ಕತ್ತಾ’ ಯುದ್ಧನೌಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆಗೊಳಿಸಿದರು.

nauke

ಮುಂಬೈನ ನೌಕಾನೆಲೆಯಲ್ಲಿ 6800 ಟನ್ ತೂಕದ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ ಅವರು, ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ. ಐಎನ್ಎಸ್ ಕೊಲ್ಕತ್ತಾ ನೌಕೆ ಸ್ವದೇಶಿ ನಿರ್ಮಿತ ನೌಕೆಯಾಗಿದ್ದು, ಇದನ್ನು ಸ್ವತಃ ನಮ್ಮ ತಂತ್ರಜ್ಞರೇ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ನೌಕೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ತಂತ್ರಜ್ಞಾನದಲ್ಲಿ ಭಾರತ ಸಹ ಮುಂಚೂಣಿಯಲ್ಲಿದ್ದು, ಐಎನ್ಎಸ್ ನೌಕೆ ಇದಕ್ಕೆ ಸಾಕ್ಷಿಯಾಗಿದೆ. ಹೀಗ ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸುವ ಕಾಲ ಬಂದಿದೆ ಆದರೆ ಅದನ್ನು ಯುದ್ಧದ ಮೂಲಕ ಪ್ರದರ್ಶಿಸುವ ಅಗತ್ಯವಿಲ್ಲ. ನಮ್ಮಲ್ಲಿರುವ ಆಧುನಿಕ ತಂತ್ರಜ್ಞಾನದಿಂದ ತೋರಬೇಕಿದೆ. ಭಾರತೀಯರೇ ನಿರ್ಮಿಸಿರುವ ಐಎನ್ಎಸ್ ನೌಕೆ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದರು.  ಐಎನ್ಎಸ್ ನೌಕೆಯ ಲೋಕಾರ್ಪಣೆಯಿಂದಾಗಿ ಜಗತ್ತು ಇಂದು ಭಾರತದತ್ತ ತಿರುಗಿ ನೋಡುತ್ತಿದೆ ಇದೆಲ್ಲವನ್ನು ಸಾಧಿಸಿದ್ದು ನಮ್ಮ ಬಾಹುಬಲ, ಬುದ್ಧಿಬಲದಿಂದಾಗಿದೆ ಎಂದು ಮೋದಿ ಹೇಳಿದರು. ಭಾರತದ ಸೇನಾಪಡೆಗಳಾದ ಭೂಸೇನೆ, ವಾಯುಸೇನೆ, ನೌಕಾಸೇನೆಗಳು ಸ್ವತಂತ್ರ ಭಾರತದ ರಕ್ಷಣೆ ಮಾಡುತ್ತಿದೆ. ಅವರ ರಕ್ಷಣೆಯಲ್ಲಿ ಭಾರತ ಸುರಕ್ಷಿತವಾಗಿದೆ ಎಂದರು.

By suddi9

Leave a Reply

Your email address will not be published. Required fields are marked *