ಪೊಳಲಿ : ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪರಿವರ್ತನಾ ರ್ಯಾಲಿ’ ಆಗಮಿಸಿ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ದರ್ಶನ ಮಾಡಿದ ಬಿಜೆಪಿ ನಾಯಕರು ಸಂಜೆ ಕಲ್ಕುಟ ದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ
ಸಂಸದ ನಳಿನ್ ಕುಮಾರ್ ಮಾತನಾಡಿ, 2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರಸ್ ಮುಕ್ತಗೊಳಿಸಲು ದೇಶದ ಜನತೆ ನರೇಂದ್ರ ಮೋದಿಗೆ ಆಶೀರ್ವಾದ ಮಾಡಿದ್ದು, ಅದರಂತೆ ಇಂದು ಬಿಜೆಪಿ ಸರಕಾರ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿದೆ ಎಂದು ಹೇಳಿದರು. ಅವರು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪರಿವರ್ತನಾ ರ್ಯಾಲಿ’ಯ ಪೊಳಲಿ ಕಲ್ಕುಟ ದಲ್ಲಿ ಬುಧವಾರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರಸ್ ಸಂಪೂರ್ಣ ನೆಲಕಚ್ಚಿ ಹೋಗುವ ಭಯದಿಂದ 20 ಸಾವಿರ ನಕಲಿ ಮತದಾರರ ಹೆಸರನ್ನು ರಚಿಸುತ್ತಿದ್ದು, ಇದಕ್ಕೆ ಉಸ್ತುವಾರಿ ಸಚಿವ ಹಾಗೂ ಕಾರ್ಪೋರೇಟ್ ಅಧಿಕಾರಿ ಮೊಹಮ್ಮದ್ ಕುಮ್ಮುಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಮಾನಾಥ ರೈ ವಿರುದ್ಧ ಹರಿಹಾಯ್ದರು.
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಗರುಡ ಮಹಂಕಾಳಿ ದೇವಸ್ಥಾನದಿಂದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಜ. 14ರಂದು ಆರಂಭಗೊಂಡಿದ್ದ `ಪರಿವರ್ತನಾ ರ್ಯಾಲಿ’ ತಾಲೂಕಿನಾದ್ಯಂತ ಸುತ್ತಾಡಿ ಜ. 24ರಂದು ಬೆಂಜನಪದವು ಶಿವಾಜಿನಗರ ಭದ್ರಕಾಳಿ ದೇವಸ್ಥಾನದಿಂದ ಅಮ್ಮುಂಜೆ ಶೀವಿನಾಯಕಜನಾರ್ಧನ ದೇವಸ್ಥಾನ ಮಧ್ಯಾಹ್ನ ತಲಪಿತು. ಅಲ್ಲಿಂದ 4 ಗಂಟೆಗೆ ಹೊರಟು ಬಡಕಬೈಲು, ಪುಂಚಮೆ ಮೂಲಕ ಪೊಳಲಿ ದೇವಸ್ಥಾನ ತಲುಪಿತು.
ಬುಧವಾರ ಸಾಗಿ ಬಂದ ರ್ಯಾಲಿಗೆ ಬಡಕಬೈಲಿನಲ್ಲಿ ಕರಿಯಂಗಳ ಗ್ರಾಮದ ಕಾರ್ಯಕರ್ತರು ವಿಶೇಷ ಸ್ವಾಗತ ನೀಡಲಾಯಿತು. ಬಿಜೆಪಿ ಕಾರ್ಯಕರ್ತರು ಪರಿವರ್ತನ ಯಾತ್ರೆಯ ರೂವಾರಿ ರಾಜೇಶ್ ನಾೈಕ್ ಅವರಿಗೆ ಬ್ರಹತ್ ಗಾತ್ರದ ಹೂಹಾರ ಹಾಕಿ ಕಾರ್ಯಕರ್ತರು ಎತ್ತಿ ಜಯಘೋಷ ಹಾಕಿದರು.

ಈ ನಡುವೆ ಕಟೀಲು ಶ್ರೀ ಹರಿನಾರಾಯಣ ಆಸ್ರಣ್ಣ ಎದುರಾಗಿದ್ದು,ರಾಜೇಶ್ ನಾಯ್ಕ್ ಸಹಿತ ಬಿಜೆಪಿ ನಾಯಕರು ಅವರ ಆಶೀರ್ವಾದ ಪಡೆದರು. ರ್ಯಾಲಿಯುದ್ದಕ್ಕೂ ಚೆಂಡನಾದ, ನಾಸಿಕ್ ಬ್ಯಾಂಡ್ ಬಿಜೆಪಿ ರ್ಯಾಲಿಗೆ ಮೆರಗು ತಂದರೆ, ಅಲ್ಲಲ್ಲಿ ಪಟಾಕಿ ಸಿಡಿಸಿ ರ್ಯಾಲಿಗೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯ ಬಿಜೆಪಿ ಕಾರ್ಯಕರ್ತರರು, ಮಹಿಳೆಯರು, ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.
ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಕ್ತಾರ ಹರಿಕೃಷ್ಣ ಬಂಟ್ವಾಳ,ಗಣೇಶ್ ಕಾರ್ಣಿಕ್ ,ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಬಿಜೆಪಿ ಉಪಾಧ್ಯಕ್ಷ ರಾಮದಾಸ ಬಂಟ್ವಾಳ, ದೇವಪ್ಪ ಪೂಜಾರಿ,ಬಿಜೆಪಿ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ, ರೊನಾಲ್ಡ್ ಡಿ’ಸೋಜ,ಜಿಲ್ಲಾ ಎಸ.ಸಿ.ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಪ್ರದೀಪಕುಮಾರ್ ಶೆಟ್ಟಿ ಅಡ್ಯಾರು, ಭಾರತಿ ಚೌಟ, ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಮೋನಪ್ಪ ದೇವಸ್ಯ, ತಾ.ಪಂ.ಸದಸ್ಯ ಯಶವಂತ ಕೋಟ್ಯಾನ್, ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ನಂದರಾಮ ರೈ, ಉಮೇಶ್ ಶೆಟ್ಟಿ, ಮನೋಹರ್ ಕಂಜತ್ತೂರು, ಗೋಪಾಲ ಬಂಗೇರ, ದೇವಿಪ್ರಸಾದ್ ಕಳ್ಳಿಗೆ, ಜನಾರ್ಧನ ಬಾರಿಂಜೆ, ಸುಕೇಶ್ ಚೌಟ,ಚಂದ್ರಶೇಖರ ಶೆಟ್ಟಿ, ಯಶೋಧರ ಬಂಗೇರಾ ,ರವೀಂದ್ರ ಸುವರ್ಣ, ಧಾಮೋಧರ, ಮಹಾಬಲ, ಜಯಂತ ಮಣಿಕಂಠಪುರ ಗ್ರಾ.ಪಂ ಸದಸ್ಯರಾದ ಲೋಕೇಶ್ ಭರಣಿ, ಸುರೇಶ್ ಮಣಿಕಂಠಪುರ,ಶಕುಂತಳಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಶವಂತ ಪೂಜಾರಿ ಸ್ವಾಗತಿಸಿ.ಚಂದ್ರಶೇಖರ ರಾವ್ ವಂದಿಸಿದರು. ಕಿಶೋರ್ ಪಲ್ಲಿಪಾಡಿ ನಿರೂಪಿಸಿದರು.
