ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ದಿ/ಶ್ರೀಮತಿಮತ್ತು ಶ್ರೀಕೆ.ಚಂದಪ್ಪ ಪೂಜಾರಿ ಇವರ ಸ್ಮಾರಣಾರ್ಥವಾಗಿ ಜ.27ರಂದು ಶನಿವಾರ ರಾತ್ರಿಗಂಟೆ 9.30ಕ್ಕೆ ಕೈಕಂಬದಲ್ಲಿ ಪುಷ್ಪಾಲಂಕೃತವಾದ ಭವ್ಯರಂಗಮಂಟಪದಲ್ಲಿ “ಶ್ರೀ ದೇವಿ ಮಹಾತ್ಮೆ” ಎಂಬ ಪುಣ್ಯ ಕಥಾಭಾಗ ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ.
ಸಂಜೆ 6 ಗಂಟೆಗೆ ಕೈಕಂಬ ಸ್ವಗ್ರಹದಿಂದ ದಂಡಿ ಮೆರವಣಿಗೆಯಲ್ಲಿ ಚೌಕಿ ಮಂಟಪಕ್ಕೆ ಶ್ರೀ ದೇವರ ಆಗಮನ ಸಂಜೆ 6.30 ರಿಂದ ಭಜನಾ ಕಾರ್ಯಕ್ರಮ 8.30ಕ್ಕೆ ಚೌಕಿ ಪೂಜೆ. ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಜರುಗಲಿದೆ. ಎಂದು ಶ್ರೀಮತಿ ಮತ್ತು ಶ್ರೀ ಕೆ. ಲೋಕೇಶ್ ಸಹೋದರ ಸಹೋದರಿಯರು ಕೈಕಂಬ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
