ಪೊಳಲಿ : ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಗರುಡ ಮಹಂಕಾಳಿ ದೇವಸ್ಥಾನದಿಂದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಜ. 14ರಂದು ಆರಂಭಗೊಂಡಿದ್ದ `ಪರಿವರ್ತನಾ ರ್ಯಾಲಿ’ ತಾಲೂಕಿನಾದ್ಯಂತ ಸುತ್ತಾಡಿ ಜ. 24ರಂದು ಬೆಂಜನಪದವು ಶಿವಾಜಿನಗರ ಭದ್ರಕಾಳಿ ದೇವಸ್ಥಾನದಿಂದ ಅಮ್ಮುಂಜೆ ಶ್ರೀ ವಿನಾಯಕ ಜನಾರ್ಧನ ದೇವಸ್ಥಾನ ಮಧ್ಯಾಹ್ನ ತಲಪಿತು. ಅಲ್ಲಿಂದ 4 ಗಂಟೆಗೆ ಹೊರಟು ಬಡಕಬೈಲು, ಪುಂಚಮೆ ಮೂಲಕ ಪೊಳಲಿ ದೇವಸ್ಥಾನ ತಲುಪಿತು.
ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ದರ್ಶನ ಮಾಡಿದ ಬಿಜೆಪಿ ನಾಯಕರು ಸಂಜೆ ಕಲ್ಕುಡದಲ್ಲಿ ತಂಗಲಿದ್ದು, ಇಲ್ಲಿ ಬಿಜೆಪಿ ಸಭೆ ನಡೆಯಿತು. ಪರಿವರ್ತನಾ ರ್ಯಾಲಿ ನಾಳೆ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪ್ರವೇಶಲಿದ್ದು, 26ರಂದು ಬಿಸಿರೋಡು ನಲ್ಲಿ ರ್ಯಾಲಿ ಮುಕ್ತಾಯಗೊಳ್ಳಲಿದೆ.
ಬುಧವಾರ ಸಾಗಿ ಬಂದ ರ್ಯಾಲಿಗೆ ಬಡಕಬೈಲಿನಲ್ಲಿ ಕರಿಯಂಗಳ ಗ್ರಾಮದ ಕಾರ್ಯಕರ್ತರು ವಿಶೇಷ ಸ್ವಾಗತ ನೀಡಲಾಯಿತು. ಬಿಜೆಪಿ ಕಾರ್ಯಕರ್ತರು ಪರಿವರ್ತನ ಯಾತ್ರೆಯ ರೂವಾರಿ ರಾಜೇಶ್ ನಾೈಕ್ ಅವರಿಗೆ ಬ್ರಹತ್ ಗಾತ್ರದ ಹೂಹಾರ ಹಾಕಿ ಕಾರ್ಯಕರ್ತರು ಎತ್ತಿ ಜಯಘೋಷ ಹಾಕಿದರು.
ಈ ನಡುವೆ ಕಟೀಲು ಶ್ರೀ ಹರಿನಾರಾಯಣ ಆಸ್ರಣ್ಣ ಎದುರಾಗಿದ್ದು,ರಾಜೇಶ್ ನಾಯ್ಕ್ ಸಹಿತ ಬಿಜೆಪಿ ನಾಯಕರು ಅವರ ಆಶೀರ್ವಾದ ಪಡೆದರು. ರ್ಯಾಲಿಯುದ್ದಕ್ಕೂ ಚೆಂಡನಾದ, ನಾಸಿಕ್ ಬ್ಯಾಂಡ್ ಬಿಜೆಪಿ ರ್ಯಾಲಿಗೆ ಮೆರಗು ತಂದರೆ, ಅಲ್ಲಲ್ಲಿ ಪಟಾಕಿ ಸಿಡಿಸಿ ರ್ಯಾಲಿಗೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯ ಬಿಜೆಪಿ ಕಾರ್ಯಕರ್ತರರು, ಮಹಿಳೆಯರು, ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.
*ಬಂಟ್ವಾಳ ಕ್ಷೇತ್ರದಲ್ಲಿ ನಾಗರಿಕರಿಂದ ಬಿಜೆಪಿ ರ್ಯಾಲಿಗೆ ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ಯಕ್ತವಾಗಿದೆ. “ಇಷ್ಟೊಂದು ಜನ ಬೆಂಬಲ ಸಿಕ್ಕಿರುವುದು ಬಿಜೆಪಿ ಗೆಲುವಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅಲ್ಲಲ್ಲಿ ಪಟಾಕಿ ಸಿಡಿಸಿದ ಕಸಗಳನ್ನು ನೋಡಿದ ಕಾರ್ಯಕರ್ತರು ಕೂಡಲೇ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಚ ಭಾರತ ಕಲ್ಪಣೆಯನ್ನು ಸಕಾರಗೊಳಿಸಿದರು. ತೆಗೆದು ಸ್ವಚ್ಚತೆ ಮಾಡಿದರು.


