454

ಅಡ್ಡೂರು: ಅಡ್ಡೂರು ಯೂತ್ ಕಾಂಗ್ರೆಸ್ ವತಿಯಿಂದ ಹೊನಲು ಬೆಳಕಿನ “ಪ್ರೋ ಕಬಡ್ಡಿ ಲೀಗ್ ಪಂದ್ಯಾಟ” ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿಂಬದಿಯಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆಯಿತು.

52552

ಈ ಪಂದ್ಯಾಕೂಟದಲ್ಲಿ 12 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಜಿಗರ್ ಮೈನ್ ಕಿನ್ಯಾ ತಂಡ ಪ್ರಥಮ ಸ್ಥಾನ ಪಡೆದು 20,018 ರೂ. ನಗದು ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡರೆ, ಬಲಿಷ್ಠ ತಂಡವೆನಿಸಿಕೊಂಡ ಅಡ್ಡೂರು ಬುಲ್ಸ್ ದ್ವಿತೀಯ ಸ್ಥಾನ ಗಳಿಸಿ 14,014 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

565555

ಈ ವೇಳೆ ಅಡ್ಡೂರು ಯೂತ್ ಕಾಂಗ್ರೆಸ್  ವತಿಯಿಂದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಜಿ.ಪಂ. ಸದಸ್ಯ ಯು.ಪಿ.ಇಬ್ರಾಹೀಂ ಅವರನ್ನು ಸನ್ಮಾನಿಸಿದರು.

4141411

ಕಾರ್ಯಕ್ರಮದಲ್ಲಿ ಶಾಸಕ ಮೊಯಿದ್ದೀನ್ ಬಾವಾ, ಗುರುಪುರ ಗ್ರಾ.ಪಂ. ಸದಸ್ಯರಾದ ಜಲೀಲ್, ಮೊಹಮ್ಮದ್, ಎ.ಕೆ.ಅಶ್ರಫ್ ಮತ್ತಿತರರು ಭಾಗವಹಿಸಿದ್ದರು.

 

By suddi9

Leave a Reply

Your email address will not be published. Required fields are marked *