KAR_5093

ಬಂಟ್ವಾಳ: ಯಕ್ಷಗಾನ ಕರಾವಳಿಯ ವಿಶಿಷ್ಟ ಕಲೆಯಾಗಿದ್ದು, ಪೌರಾಣಿಕ ಜ್ಞಾನವನ್ನು ಹೆಚ್ಚಿಸಲು ಯಕ್ಷಗಾನ ಉತ್ತಮ ವೇದಿಕೆ ಎಂದು ಎಡನೀರು ಮಠ ಕಾಸರಗೋಡು ಕೇಶವಾನಂದ ಭಾರತಿ ಮಹಾಸ್ವಾಮಿ ಹೇಳಿದ್ದಾರೆ.

ಮಂಗಳವಾರ ತಾಲೂಕಿನ ಮೆಲ್ಕಾರ್ ಪಾಣೆಮಂಗಳೂರಿನಲ್ಲಿ ಬಿ.ಸಿ.ರೋಡ್ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ವತಿಯಿಂದ ಯೋಜಿಸಿದ್ದ ಯಕ್ಷಗಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಆಶೀರ್ವಚನ ನೀಡಿ ಅವರು ಮಾತನಾಡಿದರು.

KAR_5089

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಯಕ್ಷಗಾನ ಕೃಷಿಕರ ಮನರಂಜನೆಯ ಕಾರ್ಯಕ್ರಮವಾಗಿದ್ದು. ಸಾಂಸ್ಕೃತಿಕವಾಗಿ ವಿಶೇಷ ಸ್ಥಾನ ಪಡೆದಿದೆ. ಅಲ್ಲದೆ, ತುಳುನಾಡಿನ ಹೆಮ್ಮೆಯ ಕಲೆಯಾಗಿದೆ ಎಂದು ಬಣ್ಣಿಸಿದರು.

ಈ ವೇಳೆ ವೇದಮೂರ್ತಿ ವಿಷ್ಣುಮೂರ್ತಿ ಮಯ್ಯ ಕೊಳಕೆ ಸಜಿಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಯಕ್ಷಗಾನ ಸಪ್ತಾಹ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಮಾತನಾಡಿದರು. ರಂಗ ಕಲಾವಿದ ಮಂಜು ವಿಟ್ಲ ಕಾರ್ಯಕ್ರಮವನ್ನು ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ್ ವಂದಿಸಿದರು. ಬಳಿಕ ಚಂದ್ರಾವಳಿ-ವೀರಮಣಿ ಪ್ರಸಂಗವನ್ನು ಪ್ರದರ್ಶಿಸಲಾಯಿತು.

ಯಕ್ಷಗಾನ ಸಪ್ತಾಹ: ಜ.28ರವರೆಗೆ  ಮೆಲ್ಕಾರಿನಲ್ಲಿ ಪ್ರತಿದಿನ ಸಂಜೆ 6.30 ರಿಂದ 10.30ರ ವರೆಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಜ.23ರಂದು ದಮಯಂತಿ ಪುನಃ ಸ್ವಯಂವರ-ಇಂದ್ರಜಿತು ಕಾಳಗ, 24.ರಂದು ಅಮರಶಿಲ್ಪಿ ವೀರಶಂಭು ಕಲ್ಕುಡ(ತುಳು), ಜ. 25ರಂದು ಪಂಚವಟಿ-ತರಣಿಸೇನಾ ಕಾಳಗ, ಜ.26ರಂದು ಶಾಪ-ವಿಶಾಪ, ಜ. 27ರಂದು ಶಶಿಪ್ರಭಾ-ಘೋರಭೀಷಣ ಕಾಳಗ, ಜ.28ರಂದು ಶಾಂಭವಿ ವಿಲಾಸ ಪ್ರದರ್ಶನಗೊಳ್ಳಲಿದೆ.

 

By Suddi9

Leave a Reply

Your email address will not be published. Required fields are marked *