padma
ಸಿನೆಮಾ: ಸಂಜಯ್ ಲೀಲಾ  ಬನ್ಸಾಲಿ ನಿರ್ದೇಶನದ  ವಿವಾದಿತ  ಪದ್ಮಾವತ್  ಸಿನೆಮಾ ಬಿಡುಗಡೆಗೆ  ದಿನಾಂಕ  ನಿಗದಿಯಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ರಜಪೂತಕರ್ಣಿ ಸೇನಾ ಸಂಘಟನೆ ಚಿತ್ರ ಮಂದಿರದ ಟಿಕೆಟ್ ಕೌಂಟರ್‌ಗೆ ಬೆಂಕಿ ಹಚ್ಚಿದ ಘಟನೆ ಹರ್ಯಾಣದ ಫರಿದಾಬಾದ್‌ನ ಸೆಕ್ಟರ್ 10ರಲ್ಲಿ ನಡೆದಿದೆ.

ಚಿತ್ರದ ಬಿಡುಗಡೆಯ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಿರೋ ಕರ್ಣಿ ಸೇನೆ, ಸಿನೆಮಾ ನಿರ್ದೇಶಕರ ವಿರುದ್ಧ ಘೋಷಣೆಗಳನ್ನು ಕೂಗಿರುವ ದೃಶ್ಯಾವಳಿಗಳನ್ನು ದಾಖಲಿಸಲಾಗಿದೆ.

ಜ.18ರಂದು ಸರ್ವೋಚ್ಚ ನ್ಯಾಯಾಲಯವು ಪದ್ಮಾವತಿ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಿದ ದಿನದಂದು ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಕರ್ಣಿ ಸೇನೆಯ ಕಾರ್ಯಕರ್ತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪದ್ಮಾವತ್ ಸಿನೆಮಾಗೆ ಸೆನ್ಸರ್ ಪ್ರಮಾಣಪತ್ರ ನೀಡಿರುವ ಸೆನ್ಸರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಶಿ ವಿರುದ್ಧಹರಿಹಾಯ್ದಿರುವ ಪ್ರತಿಭಟನಾಕಾರರು ಜೋಶಿಯವರನ್ನು ಜೈಪುರ ಸಾಹಿತ್ಯೋತ್ಸವಕ್ಕೆ ಆಗಮಿಸಲು ಬಿಡುವುದಿಲ್ಲ ಅಂತ ಕಿಡಿಕಾರಿದ್ರು.

ಪದ್ಮಾವತ್ ಸಿನಿಮಾದ ಬಿಡುಗಡೆಯನ್ನು ಬೆಂಬಲಿಸುವ  ಯಾರನ್ನು ಕೂಡಾ ಜೈಪುರಕ್ಕೆ ಆಗಮಿಸಲು  ಬಿಡುವುದಿಲ್ಲ  ಎಂದು  ಕರ್ಣಿ  ಸೇನೆಯ  ಅಧ್ಯಕ್ಷ  ಸುಖ್‌ದೇವ್  ಸಿಂಗಗೊಗ ಮೆದಿ ಎಚ್ಚರಿಸಿದ್ದಾರೆ.

ಚಿತ್ರದ ಹೆಸರನ್ನು ಪದ್ಮಾವತಿಯಿಂದ ಪದ್ಮಾವತ್ಮಾಡಿದ ಮಾತ್ರಕ್ಕೆ ನಮಗೆ ಸಮಾಧಾನವಾಗುವುದಿಲ್ಲ. ಸಿನಿಮಾದ ಮೇಲೆಸಂಪೂರ್ಣ ನಿಷೇಧ ಹೇರಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ತಿಳಿಸಿದ್ದಾರೆ.

ಸೆನ್ಸರ್ ಮಂಡಳಿ (ಸಿಬಿಎಫ್ಸಿ) ಪ್ರಮಾಣ ಪತ್ರ ನೀಡಿದ ಸಿನೆಮಾವನ್ನು ನಿಷೇಧಿಸುವುದು ನೈತಿಕವಾಗಿ ಸರಿಯಲ್ಲ ಎಂಬ ನೆಲೆಯಲ್ಲಿ  ಸರ್ವೋಚ್ಚ ನ್ಯಾಯಾಲಯವು ಪದ್ಮಾವತ್ ಸಿನೆಮಾದ ಮೇಲೆ ಗುಜರಾತ್,  ಮಧ್ಯಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನ ಸರಕಾರಗಳು ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿತ್ತು.

ಆದರೆ ಗುಜರಾತ್ ನಲ್ಲಿ ಕರ್ಣಿ ಸೇನೆಯ ಕಾರ್ಯಕರ್ತರು ತಮ್ಮ ಚಿತ್ರ ಮಂದಿರಕ್ಕೆ ಹಾನಿ ಉಂಟು ಮಾಡುವ ಭಯದಿಂದ ಚಿತ್ರ ಮಂದಿರದ ಮಾಲಕರು ಪದ್ಮಾವತ್ ಸಿನಿಮಾವನ್ನು ಪ್ರದರ್ಶಿಸಲು ಹಿಂದೇಟು ಹಾಕಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಾವು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆನಡೆಸಿದ್ದೇವೆ. ಅವರು ನಮ್ಮ ಚಿತ್ರ ಮಂದಿರಗಳಿಗೆ ಭದ್ರತೆಯನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

ಆದರೆ ಏನೇ ಆದರೂ ಕೊನೆಯಲ್ಲಿ ನಷ್ಟ ಅನುಭವಿಸುವವರು ನಾವೇ. ನಮ್ಮ ಮಲ್ಟಿಪ್ಲೆಕ್ಸ್ ಅಥವಾ ಚಿತ್ರ ಮಂದಿರಗಳಿಗೆ ಹಾನಿಯಾಗದು ಎಂದು ಪೊಲೀಸರಾಗಲೀ ಅಥವಾ ಸರಕಾರವಾಗಲೀ ಹೇಗೆ ಭರವಸೆ ನೀಡುತ್ತದೆ ಎಂದು ಗುಜರಾತ್ ಮಲ್ಟಿಪ್ಲೆಕ್ಸ್ ಮಾಲಕರ ಸಂಘದ ಸದಸ್ಯ ಮತ್ತು ವೈಡ್ ಆ್ಯಂಗಲ್ ಮಲ್ಟಿಪ್ಲೆಕ್ಸ್‌ನ ನಿರ್ದೇಶಕ ರಾಕೇಶ್ ಪಟೇಲ್ ಪ್ರಶ್ನಿಸಿದ್ದಾರೆ.

ಹಾಗಾಗಿ  ಜನರೇ  ಚಿತ್ರಮಂದಿರಕ್ಕೆ ಬರದೆ ಅಥವಾ  ಚಿತ್ರಮಂದಿರಕ್ಕೆ ಹಾನಿಯಾಗಿ ನಷ್ಟ ಅನುಭವಿಸುವ ಬದಲು ಪದ್ಮಾವತ್ ಸಿನಿಮಾವನ್ನು ಪ್ರದರ್ಶಿಸದೆ ಇರಲು ಗುಜರಾತ್‌ನ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರದ ಮಾಲಕರು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *