7777777

ಬೆಂಗಳೂರು:  ಮರಳಿನ ಅಭಾವ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಂ ಸ್ಯಾಂಡ್ ಅಥವಾ ಮಲೇಶಿಯನ್ ಸ್ಯಾಂಡ್ ಮರಳು ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮೊದಲ ಹಂತದಲ್ಲಿ ಬೆಂಗಳೂರು ಕ್ಯಾತ್ಸಂದ್ರ ಹಾಗು ರಾಮನಗರದಲ್ಲಿ ಮರಳು ಮಾರಾಟ ಆರಂಭವಾಗಲಿದೆ. 1 ಲಕ್ಷ ಟನ್ ಎಂ ಸ್ಯಾಂಡ್ ಮಾರಾಟಕ್ಕೆ ಲಭ್ಯವಿದೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ.

ಪ್ರತೀ ಮೂಟೆ ಎಂ ಸ್ಯಾಂಡನ್ನ 200 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪ್ರತೀ ಟನ್ ಮರಳಿಗೆ 4 ಸಾವಿರ ನಿಗದಿಪಡಿಸಲಾಗಿದೆ ಎಂದು ಬಾದರ್ಲಿ ತಿಳಿಸಿದರು.

ಆರಂಭಿಕ ಹಂತದಲ್ಲಿ ಲಕ್ಷ ಟನ್ ಎಂ ಸ್ಯಾಂಡ್ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರಿಂದ ಸಿಗುವ ರೆಸ್ಪಾನ್ಸ್ ನೋಡಿಕೊಂಡು‌ ಮಾರಾಟದ ವ್ಯಾಪ್ತಿ ವಿಸ್ತರಿಸುವುದಾಗಿದಾಗಿ ಎಂಎಸ್ಐಎಲ್ ಎಂಡಿ ಪ್ರಕಾಶ್ ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *