ವಿಜಯಪುರ: ಆಸ್ಪತ್ರೆಯ ವಾರ್ಡಿನ ಸೌಚಾಲಯದಲ್ಲೇ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.
ಸ್ವಾತಿ ಹೊಸಮನಿ(28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಯುವಕನೋರ್ವನಿಗೆ ಕುಮ್ಮಕ್ಕು ನೀಡಿದ್ದಾಳೆಂದು ಆರೋಪಿಸಿ ಗ್ರಾಮಸ್ಥರು ಸ್ವಾತಿಗೆ ಹಲ್ಲೆ ನಡೆಸಿದ್ದು, ಇದರಿಂದ ಗಾಯಗೊಂಡಿದ್ದ ಸ್ವಾತಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದ್ದು, ಆದರೆ ಇಂದು ಬೆಳಗ್ಗೆ ವಾರ್ಡಿನ ಸೌಚಾಲಯದಲ್ಲೇ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಗಾಂಧಿ ಚೌಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

