ಬೆಂಗಳೂರು: ಅನಾರೋಗ್ಯದಿಂದ ಇಂದು ವಿಧಿವಶರಾದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ ಅಂತ್ಯಸಂಸ್ಕಾರ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿತು.
ಕುಟುಂಬಸ್ಥರು, ಅಪಾರ ಅಭಿಮಾನಿಗಳು ಕಾಶಿನಾಥ್ ಅವರ ಅಂತಿಮ ದರ್ಶನ ಪಡೆದ ಬಳಿಕ ಕಾಶಿನಾಥ್ ಪತ್ರ ಅಭಿಮನ್ಯು ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸರ್ವೇ, ನೀಲಗಿರಿ, ಮಾವಿನ ಮರ, ಹುಣಸೇ, ಶ್ರೀಗಂಧ ಮರಗಳನ್ನು ಚಿತೆಗೆ ಬಳಸಲಾಗಿದ್ದು, ತುಪ್ಪ, ಕರ್ಪೂರದ ಮೂಲಕ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪಾರ ಬಂಧುವರ್ಗದವರು, ಅಭಿಮಾನಿಗಳು ಸ್ಥಳದಲ್ಲಿ ನೆರದಿದ್ದರು.

