ದಿಲ್ಲಿ: ಇಸ್ಲಾಮಿನ ಮದರಸಾಗಳ ವಿರುದ್ಧ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂಬ ಆರೋಪಿಸಿ ಶಿಯಾ, ಸುನ್ನಿ ಧರ್ಮಗುರುಗಳು ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸಿಮ್ ರಿಝ್ವಿ ವಿರುದ್ಧ ಬುಧವಾರ ದೂರು ದಾಖಲಿಸಿದ್ದಾರೆ.
“ಇಸ್ಲಾಮಿನ ಮದರಸಾಗಳು ಸಮಾಜಕ್ಕೆ ಎಷ್ಟು ವಿದ್ಯಾರ್ಥಿಗಳನ್ನು ಇಂಜಿನಿಯರ್ ಹಾಗೂ ಐಎಎಸ್ ಅಧಿಕಾರಿಗಳನ್ನಾಗಿ ಮಾಡಿವೆ. ಕೆಲವು ಮದರಸಾಗಳಂತೂ ಉಗ್ರರನ್ನಾಗಿ ಮಾಡಿವೆ” ಎಂದು ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಲ್ಲೆಖಿಸಿ ರಿಝ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದ್ದರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿಯಾ, ಸುನ್ನಿ ಧರ್ಮಗುರುಗಳು ರಿಝ್ವಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

