K-Sivan-1ದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಶಿವನ್‌ ಕೆ. ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಎ.ಎಸ್‌‌.ಕಿರಣ್‌ ಕುಮಾರ್‌ ಅವರ ಅಧಿಕಾರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ  ಶಿವನ್‌ ಅವರನ್ನು ನೇಮಕಗೊಂಡಿದ್ದು, ಜ.12ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಶಿವನ್‌ ಅವರು ಮದ್ರಾಸ್‌ ಐಐಟಿಯಿಂದ 1980ರಲ್ಲಿ ಏರೋನಾಟಿಕಲ್‌ ಇಂಜಿನಿಯರಿಂಗ್‌ ಪದವಿ, ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್‌ ಇಂಜನಿಯರಿಂಗ್‌ ಪದವಿ ಹಾಗೂ ಐಐಟಿ ಬಾಂಬೆಯಿಂದ 2006ರಲ್ಲಿ ಏರೋಸ್ಪೇಸ್‌ ಇಂಜನಿಯರಿಂಗ್‌ನಲ್ಲಿ ಪಿಹೆಚ್‌ಡಿ ಪಡೆದಿದ್ದು, ಇತ್ತೀಚೆಗೆ ವಿಕ್ರಮ್‌ ಸಾರಾಭಾಯ್‌ ಅಂತರಿಕ್ಷ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *