ಬಂಟ್ವಾಳ: ಪಂಚ ದೈವ ಕಲಾಶಕ್ತಿಯಿಂದ ಕೂಡಿರುವ ಐವೆರ್ ಉಲ್ಲಾಕುಲು, ಐದು ದೈವಗಳು ಹಾಗೂ ಶ್ರೀ ಪಂಚದುರ್ಗಾಪರಮೇಶ್ವರಿ ಸೇರಿರುವ ಅತ್ಯಂತ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಜ.14 ರಿಂದ ಜ. 19ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೆಗೆ ರವಿವಾರ ಚಾಲನೆ ದೊರಕಿತು.
ಬೆಳಗ್ಗೆ ಸ್ಥಳ ಶುದ್ಧಿ, ಕಲಶಾಭಿಷೇಕ, ಮಹಾಪೂಜೆ, ಚೆಂಡು, ಧ್ವಜಾರೋಹಣ ನಡೆಯಿತು. ಮಧ್ಯಾಹ್ನ ಬೆಂಗಳೂರಿನ ವಿಶ್ವನಾಥ ಶೆಟ್ಟಿ ಹಾಗೂ ಸುಜಾತ ದಂಪತಿಗಳ ವತಿಯಿಂದ ಅನ್ನಸಂತರ್ಪಣೆ ನಡೆಯಿತು.ಗ್ರಾಮದ ಹಾಗೂ ಪರವೂರ ಸಾವಿರಾರು ಭಕ್ತಾ„ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಶ್ರೀ ಕ್ಷೇ.ಧ.ಗ್ರಾ. ಯೋಜನೆ ಉಳಿ ಕಾರ್ಯಕ್ಷೇತ್ರದ ಒಕ್ಕೂಟಗಳ ವತಿಯಿಂದ ಮಜ್ಜಿಗೆ ವಿತರಣೆ ವ್ಯವಸ್ಥೆಗೊಳಿಸಿದ್ದರು.ದುಬಾೈಯ ಯಶವಂತ ಸಾಲಿಯಾನ್ ಕೊರಡಿಂಗೇರಿ ಅವರ ವತಿಯಿಂದ ದೇವಳಕ್ಕೆ ಹೂವಿನ ಅಲಂಕಾರ ನಡೆಸಿದ್ದರು.

ದೇವಳದ ಜೀರ್ಣೋದ್ಧಾರ ಸಮಿತಿಯ ಸ್ಥಾಪಕಾಧ್ಯಕ್ಷ ಕೆ.ಜಾರಪ್ಪ ಶೆಟ್ಟಿ ಖಂಡಿಗ, ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ, ಬಾರ್ದಡ್ ಗುತ್ತಿನ ಮನೆಯವರು, ಅಧ್ಯಕ್ಷ ಯು. ದಾಮೋದರ ನಾಯಕ್, ಪೂರ್ವಾಧ್ಯಕ್ಷ ಜಯ ಶೆಟ್ಟಿ ಕಿಂಜಾಲು,ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಕಾರ್ಯದರ್ಶಿ ನಾರಾಯಣ ರೈ,ಪದಾ„ಕಾರಿಗಳಾದ ಅಗ್ಪಲ ಸಂಜೀವ ಗೌಡ, ಪಿ.ರಾಮಯ್ಯ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಪಿ.ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್,ಉಳಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ.ಚೆನ್ನಪ್ಪ ಸಾಲಿಯಾನ್, ಕಾರ್ಯನಿರ್ವಹಣಾಧಿಕಾರಿ ನಾರಾಯಣ ರೈ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಮೈರ, ಶ್ರೀ ಸತ್ಯ ಸಾಯಿ ಸೇವಾಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು, ಶ್ರೀ ಪಂಚದುರ್ಗಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜ.15 ರಂದು ಬೆಳಗ್ಗೆ ಚಂಡಿಕಾಹೋಮ, ಮಧ್ಯಹ್ನ 12.30ಕ್ಕೆ ಮಹಾಪೂಜೆ, ಹಾಗೂ ಅನ್ನಸಂತರ್ಪಣೆ. ಸಂಜೆ 5.30ಕ್ಕೆ ಚೆಂಡು, ರಾತ್ರಿ 10ರಿಂದಉತ್ಸವ,ರಾತ್ರಿ ಶ್ರೀ ಪಂಚದುರ್ಗಾ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
