ಕಿನ್ನಿಕಂಬಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ಮಾರ್ಗದರ್ಶನದಲ್ಲಿ ಕಂದಾವರ ಒಕ್ಕೂಟ ಹಾಗೂ ಕೈಕಂಬ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಂಯುಕ್ತಾಶ್ರಯದಲ್ಲಿ ಜ.21 ರಂದು ಇಲ್ಲಿನ ಶ್ರೀ ರಾಧಕೃಷ್ಣ ಭಜನಾ ಮಂದಿರದಲ್ಲಿ 12ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಜರಗಲಿದೆ .
ಅಂದು ಬೆಳಗ್ಗೆ 7 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಬಳಿಕ 11:30ಕ್ಕೆ ನಡೆಯಲಿರುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದಾವರ ಗ್ರಾ. ಪಂ. ಅಧ್ಯಕ್ಷೆ ವಿಜಯ ಜಿ.ಸುವರ್ಣ ವಹಿಸಲಿದ್ದು, ನಾಗರಾಜ ಭಟ್ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಮ್ಮರಬ್ಬ, ಶರತ್ ಶೆಟ್ಟಿ ಪಡುಪಳ್ಳಿ ವಾಮಂಜೂರು, ಉದ್ಯಮಿ ಹರಿರಾವ್ ಕೈಕಂಬ, ಕೆ. ಶ್ರೀಧರ ರಾವ್, ಶಿವರಾಮ ಕೆ. ,ಸತೀಶ್ ಶೆಟ್ಟಿ , ಬಾಬು, ಶಾಲಿನಿ ಎಸ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.
