ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಹಾನ್ ದೇಶ ಭಕ್ತ ಸ್ವಾಮಿವಿವೇಕಾನಂದರ ಜನ್ಮದಿನಾಚರಣೆಯು ಜ.12ರಂದು ಜರುಗಿತು. ಪೊಳಲಿ ರಾಮಕೃಷ್ಣ ತಪೋವನದಿಂದ ಪೊಳಲಿ ದೇವಳದ ರಥಬೀದಿಯಲ್ಲಿ ಸಾಗಿ ವಿವೇಕಾನಂದ ರಸ್ತೆಯ ಮೂಲಕ ಅಡ್ಡೂರಿನವರೆಗೆ ಮೆರವಣಿಗೆ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.12vp vivekananda3

ಆಶ್ರಮದ ಶಾಂತಸ್ವರೂಪನಂದ ಸ್ವಾಮೀಜಿ, ಪದ್ಮಪಾದನಂದ ಸ್ವಾಮೀಜಿ, ಜನಾರ್ಧನ,ರಾಜೇಂದ್ರ, ಶ್ರೀಪತಿ ಆಶ್ರಮದ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಶ್ರೀ ವಿದ್ಯಾ ವಿಲಾಸ ಶಾಲೆ ಪೊಳಲಿ, ಶ್ರೀ ರಾಜರಾಜೇಶ್ವರೀ ಪ್ರೌಢಶಾಲೆ ಪೊಳಲಿ ರಾಜ್ ಅಕಾಡೆಮಿ ಶಾಲೆ ಗಂಜಿಮಠ, ನಿರಂಜನ ಸ್ವಾಮಿ ಕಾಲೇಜು ಸುಂಕದಕಟ್ಟೆ, ಮೊರಾರ್ಜಿದೇಸಾಯಿ ಶಾಲೆ ನೀರುಮಾರ್ಗ, ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಈ ಆರು ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.12vp swami vivekananda meravanige

ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ರಾಮಕೃಷ್ಣ ತಪೋವನ ಶಾಖೆ  ಪೊಳಲಿ, ವೆಂಕಟೇಶ ನಾವಡ ಪೊಳಲಿ, ತಾ.ಪಂ ಸದಸ್ಯ ಯಶವಂತ ಪೂಜಾರಿ, ಪಂ ಸದಸ್ಯರಾದ ಲೋಕೇಶ್ ಭರಣಿ, ಹಾಗೂ ವಿವಿಧ ಆರು ಶಾಲೆಯ ಶಿಕ್ಷಕರು, ಭಾಗವಹಿಸಿದ್ದರು. ತದನಂತರ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು.ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಸ್ವಾಮಿ ವಿವೇಕಚೈತನ್ಯಾನಂದ ಅವರು ನೀಡಿದರು.12vpvivekananda2

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

 

By suddi9

Leave a Reply

Your email address will not be published. Required fields are marked *