ಬಂಟ್ವಾಳ:ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ 26ನೇ ವಾರ್ಷಿಕ ವಿಗ್ರಹ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಇಲ್ಲಿನ ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ ಮತ್ತು ಸದ್ಗುರು ಶ್ರೀ ಗೋವಿಂದ ಸ್ವಾಮೀಜಿದ್ವಯರ ಪಂಚಲೋಹ ವಿಗ್ರಹಕ್ಕೆ ಮಹಿಳೆಯರು ಸಹಿತ ಅಪಾರ ಮಂದಿ ಭಕ್ತರು ಶನಿವಾರ ಸ್ವತಃ ಸೀಯಾಳ ಅಭಿಷೇಕ ನೆರವೇರಿಸಿದರು.
ಮಹಾರಾಷ್ಟ್ರದ ಗಣೇಶಪುರಿ ಮಾದರಿಯಲ್ಲಿ ಪ್ರತೀ ವರ್ಷಕ್ಕೊಮ್ಮೆ ಭಕ್ತರು ಯಾವುದೇ ಜಾತಿ ಬೇಧವಿಲ್ಲದೆ ಮಂದಿರದ ಗರ್ಭಗುಡಿ ಪ್ರವೇಶಿಸಿ ಸ್ವಾಮೀಜಿದ್ವಯರ ವಿಗ್ರಹಕ್ಕೆ ಹಾಲು, ಸೀಯಾಳ ಅಭಿಷೇಕ ನಡೆಸುವ ಮೂಲಕ ಪುನೀತರಾಗುತ್ತಿದ್ದಾರೆ.
ಇದೇ ವೇಳೆ ಗಣಪತಿ ಹವನ ಮತ್ತು ಭಜನೆ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಆಡಳಿತ ಸಮಿತಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ ಮುಂಬೈ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ರಂಗಭೂಮಿ ಕಲಾವಿದ ವಿಜಯ ಕುಮಾರ್ ಕೊಡಿಯಾಲ್ಬೈಲು, ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ ಭಂಡಾರಿ, ಸದಸ್ಯ ಪ್ರವೀಣ ಜಕ್ರಿಬೆಟ್ಟು, ಪ್ರಮುಖರಾದ ಸುಲೋಚನಾ ಜಕ್ರಿಬೆಟ್ಟು, ಜಿ.ಆನಂದ, ರಾಮರಾಯ ಕಿಣಿ, ಜೆ.ಗಜೇಂದ್ರ ಪ್ರಭು, ಸುರೇಶ ಕುಲಾಲ್, ಹರೀಶ ಪೂಜಾರಿ, ಉದಯ ಕುಮಾರ್, ಸೇಸಪ್ಪ ಶೆಟ್ಟಿ, ಗೋಪಾಲ ಪೂಜಾರಿ, ಜಯಪ್ರಕಾಶ್ ಜಕ್ರಿಬೆಟ್ಟು, ಮೋಹನ್ ಕೆ.ಶ್ರೀಯಾನ್ ರಾಯಿ, ಜನಾರ್ದನ ಕುಲಾಲ್ ಮತ್ತಿತರರು ಇದ್ದರು.
