Published On: Thu, Jan 4th, 2018

ದೀಪಕ್ ಕೊಲೆ ಪ್ರಕರಣ: ನ್ವಾಲರ ಬಂಧನ

IMG-20180103-WA0419

ಮಂಗಳೂರು: ನಗರದ ಕಾಟಿಪಳ್ಳ ವೃತ್ತದಲ್ಲಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮುಲ್ಕಿ- ಸುರತ್ಕಲ್ ಠಾಣಾ ಪೊಲೀಸರು ಬುಧವಾರ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ ಟಾರ್ಗೆಟ್ ಗುಂಪಿನ ಸಹಚರ ಸಫ್ವಾನ್, ನೌಶದ್, ಪಿಂಕಿ ನವಾಝ್, ರಿಝ್ವಾನ್ ಹಾಗೂ ಇರ್ಷಾನ್ ಬಂಧಿತರು ಎಂದು ಗುರುತಿಸಲಾಗಿದೆ.

ಇಲ್ಲಿನ ಸ್ಥಳೀಯ ಮೀಜಾರು ಎಂಬಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳ ಕಾರಿನ ಮೇಲೆ ಫೈರಿಂಗ್ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಪೊಲೀಸರು ಫೈರಿಂಗ್ ನಡೆಸುವ ವೇಳೆ ಇಬ್ಬರು ಆರೋಪಿಗಳಾದ ಪಿಂಕಿ ನವಾಝ್, ರಿಝ್ವಾನ್ ಗೆ ಗುಂಡು ತಗುಲಿದ್ದು, ಇವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಲ್ಲಿ ಗುರುತಿಸಿಕೊಂಡಿರುವ ಉಳ್ಳಾಲ ಟಾರ್ಗೆಟ್ ಗುಂಪಿನ ಸಫ್ವಾನ್ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ: ಬುಧವಾರ ನಗರದ ಸುರತ್ಕಲ್ ವ್ಯಾಪ್ತಿಯ ಕಾಟಿಪಳ್ಳದಲ್ಲಿ  ಹಿಂದೂ ಸಂಘಟನೆಯೊಂದಕ್ಕೆ ಸೇರಿದ್ದ ದೀಪಕ್ ರಾವ್ ನನ್ನು  ಕಾರೊಂದರಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪೊಂದು ಈತನ ಮೇಲೆ ತಲವಾರ್ ನಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

ಇದರಿಂದ ಕಾರ್ಯಪ್ರವೃತ್ತರಾದ ಮುಲ್ಕಿ-ಸುರತ್ಕಲ್ ಪೊಲೀಸರು ಆರೋಪಿಗಳ ಮೇಲೆ ಮೀಜರು ಬಳಿ ಫೈರಿಂಗ್ ನಡೆಸುವ ಮೂಲಕ ಬಂಧಿಸಿದ್ದಾರೆ. 

ಶವಯಾತ್ರೆಗೆ ಪೊಲೀಸರ ನಿರಾಕರಣೆ: ಹಿಂದೂಪರ ಸಂಘಟನೆಗಳು ಸೇರಿ ಕಾಟಿಪಳ್ಳ-ಸುರತ್ಕಲ್ ವ್ಯಾಪ್ತಿಯಲ್ಲಿ ಬಂದ್ ಗೆ ಕರೆ ನೀಡಿದ್ದು, ಈ ಮಧ್ಯೆ ದೀಪಕ್ ಮೃತದೇಹವನ್ನು ಇಂದು ಬೆಳಗ್ಗೆ 10ಕ್ಕೆ ನಗರದ ಆಸ್ಪತ್ರೆಯಿಂದ ಸ್ವಗ್ರಹಕ್ಕೆ ಕರೆತರಲು “ಶವಯಾತ್ರೆ” ನಡೆಸಲು ಹಿಂದೂ ಕಾರ್ಯಕರ್ತರಿಂದ ಭರದ ಸಿದ್ಧತೆ ನಡೆಸಿದ್ದದಾದರೂ, ಪೊಲೀಸರು ಅನುಮತಿಗೆ ನಿರಾಕರಿಸಿದ್ದಾರೆ. ಅಲ್ಲದೆ, ಪೊಲೀಸರೇ ಸ್ವತಃ ದೀಪಕ್ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ನಿವಾಸಕ್ಕೆ ಕರೆ ತಂದಿದ್ದಾರೆ. ಇನ್ನೂ ಇದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಸ್ ಆರ್ ಪಿ ನಿಯೋಜನೆ: ಇನ್ನೂ ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸುರತ್ಕಲ್, ಕಾಟಿಪಳ್ಳ-ಕೈಕಂಬ ಹಾಗೂ ಕೃಷ್ಣಾಪುರ ಸೇರಿದಂತೆ ಇನ್ನಿತರ ಸೂಕ್ಷ್ಮ ಪ್ರದೇಶದಲ್ಲಿ ಕೆಎಸ್ ಆರ್ ಪಿ ತುಕಡಿಯನ್ನು ಹೆಚ್ಚಚಿನ ಸಂಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಇಂದು ನಿರ್ಬಂಧಕಾಜ್ಞೆ: ನಗರದ ಪೊಲೀಸ್ ಕಮಿಷನೇಟರ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಕಲಂ 35ರ ಅನ್ವಯ ರಾತ್ರಿ 10ರವರೆಗೆ ನಿರ್ಬಂಧಕಾಜ್ಞೆ ವಿಧಿಸಿ ಆದೇಶ ಹೊರಡಿಸಲಾಗಿದೆ.

ಮಂಗಳೂರು: ವ್ಯಕ್ತಿಯೋರ್ವರಿಗೆ ದುಷ್ಕರ್ಮಿಗಳ ಗುಂಪೊಂದು ತಲವಾರ್ ನಿಂದ ಹಲ್ಲೆ ನಡೆಸಿದ ಘಟನೆ ನಗರದ ಚೌಕಿಯಲ್ಲಿ ಬುಧವಾರ ತಡ ರಾತ್ರಿ ನಡೆದಿದ್ದು, ಹಲ್ಲೆಗೊಳಗಾದವರನ್ನು ಬಶೀರ್(42) ಎಂದು ಗುರುತಿಸಲಾಗಿದೆ.

ಬಶೀರ್ ಅವರು ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ.

IMG-20180103-WA0402

ಸುರತ್ಕಲ್: ಯುವಕನೋರ್ವ ನಗರದಿಂದ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಅಡ್ಡಗಟ್ಟಿ ತಲವಾರ್ ನಿಂದ ತಲೆಗೆ ದಾಳಿ ನಡೆಸಿದ ಘಟನೆ ಇಲ್ಲಿನ ಪೇಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಮೊಹಮ್ಮದ್ ಮುಬಶ್ಶಿರ್ (23) ಹಲ್ಲೆಗೊಳಗಾದವ ಎಂದು ಗುರುತಿಸಲಾಗಿದೆ.

ದಾಳಿಯಿಂದ ಈತನ ತಲೆಗೆ ತೀವ್ರ ಸ್ವರೂಪ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆ ಗೆ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter