ಉಳ್ಳಾಲ: ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ತಹಶೀಲ್ದಾರ್ ನಾರಾಯಣ ಶೆಟ್ಟಿ ಶನಿವಾರ ಉದ್ಘಾಟಿಸಿದರು.
ಈ ವೇಳೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮೊಹಮ್ಮದ್ ಹಸನ್ ಎ.ಐ, ಆನಂದ ಬಸವರಾಜ್ ಸರ್ವಿ, ಸುಬೀಕ್ಷ ಎಸ್, ಕೆ.ಎಸ್ ಜುನೈನ್, ಝೈಬಾಬ.ಎಂ, ಫಾತಿಮಾ ಸುಹಾನ ಹಾಗೂ ಕಳೆದ ಸಾಲಿನ ಎಸೆಸ್ಸೆಲ್ಸಿ ಪರಿಕ್ಷೇಯಲ್ಲಿ ಅಧಿಕ ಅಂಕಗಳಿಸಿದ ಹತಿಕ.ಜಿ, ಮಾಲವಿಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ಮ ಗ್ರಾ.ಪಂ ಅಧ್ಯಕ್ಷೆ ವಿಜಯ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸದಸ್ಯರಾದ ಯೂಸುಫ್ ಬಾವ, ಕಬೀರ್.ಡಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಪಿ.ಎಚ್, ಸಿಆರ್ಪಿ ರಾಜೇಶ್ವರಿ, ಪಿ.ಇಬ್ರಾಹೀಂ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಮೇಶ್ ಸಲ್ಯಾನ್, ಅಧ್ಯಕ್ಷ ಶಿಹಾಬುದ್ದೀನ್.ಡಿ, ಕಾರ್ಯದರ್ಶಿ ಸಂದೀಪ್ ಪೂಜಾರಿ, ಜೊತೆ ಕಾರ್ಯದರ್ಶಿ ಇರ್ಷಾದ್ ಟಿ.ಎಂ, ಶಿಕ್ಷಕರಾದ ವಿನಯಾ, ನಯನಾ, ವೆಂಕಟೇಶ್.ಕೆ, ವಿಷ್ಣು ನಾರಾಯಣ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದರು.
ಶಾಲಾ ಸಿಬ್ಬಂದಿ ಕೃಷ್ಣ, ಮುಖ್ಯ ಶಿಕ್ಷಕಿ ಚಂಚಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಅರುಣಾ ವಂದಿಸಿದರು. ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಿದರು.





