arrest_shutterstock

ಮಂಗಳೂರು: ನಗರದಲ್ಲಿ ಕಳೆದ ಡಿ.27ರಂದು ರಾ.ಹೆ.66ರ ಜಪ್ಪಿನಮೊಗರು ಬಳಿ ನಡೆದ ರಿಕ್ಷಾ ಚಾಲಕೋರ್ವನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಕಂಕನಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಭವಿತ್ ರಾಜ್ ಸರಿಪಲ್ಲ (29) ಹಾಗೂ ವೆಂಕಟೇಶ್ (31) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್, ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ: ಕಳೆದ ಡಿ.27ರ ತಡರಾತ್ರಿ ನಗರದ ಜಪ್ಪಿನಮೊಗರು- ಪಂಪ್ ವೆಲ್ ರಸ್ತೆ ಬಳಿ  ಕಾರಿಗೆ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಲಿಸುತ್ತಿದ್ದ ಆಟೊ ರಿಕ್ಷಾವನ್ನು ಆರೋಪಿಗಳಾದ ಭವಿತ್ ರಾಜ್ ಸರಿಪಲ್ಲ ಹಾಗೂ ವೆಂಕಟೇಶ್ ತಡೆದು ರಿಕ್ಷ ಚಾಲಕನಾದ ಉಳ್ಳಾಲದ ನಿವಾಸಿ ಮೊಹಮ್ಮದ್ ಶಾಕೀರ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದರು.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಸ್ಪಷ್ಟನೆ: ಘಟನೆಯಲ್ಲಿ ಆರೋಪಿಗಳು ಶಾಕೀರ್ ಮೇಲೆ ಕಬ್ಬಿಣದದಿಂದ ಹಲ್ಲೆ ಮಾಡಿದ್ದೇ ಹೊರತು ತಲವಾರ್ ನಿಂದಲ್ಲ. ಇನ್ನೂ ಈ ಘಟನೆ ಕಾರಿಗೆ ಸೈಡ್ ಕೊಡುವ ವಿಚಾರಕ್ಕೆ ನಡೆದಿದ್ದು, ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಕಂಕನಾಡಿ ಪೊಲೀಸರು ಸ್ಪಷ್ಟನೆ ನಿಡಿದ್ದಾರೆ.

ಈ ಕಾರ್ಯಚರಣೆಯಲ್ಲಿ ದಕ್ಷಿಣ ವಿಭಾಗದ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ರಾಮರಾವ್, ಕಂಕನಾಡಿ ನಗರ ಪೊಲೀಸ್ ನಿರೀಕ್ಷಕ ರವಿ ನಾಯ್ಕ್, ಪಿಎಸ್ಸೈ ಪ್ರದೀಪ್, ಸಿಬ್ಬಂದಿ ವರ್ಗದವರಾದ ವಿನೋದ್, ಮದನ್, ರಘು ವೀರ್, ಮೇಘಾರಾಜ್, ಸಂದೀಪ್, ನಿತೇಶ್ ಭಾಗವಹಿಸಿದ್ದರು.

 

 

By suddi9

Leave a Reply

Your email address will not be published. Required fields are marked *