ಸುದ್ದಿ9ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನಾಷ್ಠಮಿಯು ಆ.16ರಿಂದ 18ರವರೆಗೆ ನಡೆಯಲಿದೆ. ಆ.16 ಶನಿವಾರ ಬೆಳಗ್ಗೆ 8ಕ್ಕೆ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಸಂಸ್ಕ್ರತಿ ಪ್ರತಿಷ್ಠಾನ ಕುಲಪತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಉದ್ಘಾಟಿಸಲಿದ್ದಾರೆ. ಬೆಳಗ್ಗೆ 8.30ರಿಂದ ದ.ಕ.ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಆ.17 ಆದಿತ್ಯವಾರ ಬೆಳಗ್ಗೆ 8.30ಕ್ಕೆ ಭಜನಾ ಮಂಗಳೋತ್ಸವ, 9ರಿಂದ 10ವಿಶೇಷ ಭಜನೆ, 10ರಿಂದ 11.30 ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ, 11.30ರಿಂದ 11.45 ಅಭಿಷೇಕ, 11.45ರಿಂದ 12.30 ಮಹಾಮಂಗಳಾರತಿ, ಮಧ್ಯಾಹ್ನ 12.30 ಸಾರ್ವಜನಿಕ ಅನ್ನಸಂತರ್ಪಣೆ, 1.30ರಿಂದ 5.30ಮಕ್ಕಳ ಛದ್ಮವೇಷ ಸ್ಪಧರ್ೆ, 6.30ಕ್ಕೆ ಸಂಧ್ಯಾರತಿ. ಆ.18 ಸೋಮವಾರ ಶ್ರೀ ಕೃಷ್ಣನ ಮೆರವಣಿಗೆ ಮತ್ತು ಉತ್ಸವ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ.

lord-krishna

By suddi9

Leave a Reply

Your email address will not be published. Required fields are marked *