ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವು ಆ.9ರಿಂದ ಶನಿವಾರದಿಂದ ಆರಂಭಗೊಂಡು ಆ.15 ಶುಕ್ರವಾರದವರೆಗೆ ನಡೆಯಲಿದೆ.
ಪ್ರತಿದಿನ ಸಂಜೆ ರಾಮಕೃಷ್ಣ ತಪೋವನದಲ್ಲಿ 5.30ರಿಂದ 6 ಗಂಟೆ ತನಕ ಭಜನೆ ನಂತರ ಪೊಳಲಿ ವಿದ್ವಾನ್, ಶಾಸ್ತ್ರಿ ಎಂ.ಎ ವೇದಮೂತರ್ಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ನೇತೃತ್ವದಲ್ಲಿ 6ರಿಂದ 8 ಗಂಟೆ ತನಕ ಪ್ರವಚನ ನಡೆಯುತ್ತಿದ್ದು . ಇದರ ಉದ್ಘಾಟನೆಯನ್ನು ಕಲ್ಲಡ್ಕ ಶ್ರೀ ರಾಮ ವಿದಾಸಂಸ್ಥೆ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖರು ಡಾ.ಪ್ರಭಾಕರ ಭಟ್ ಕಲಡ್ಕ ಉದ್ಘಾಟಿಸಿದರು.ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಉಪಸ್ಥಿತರಿದ್ದರು.





