ಬಡಕಬೈಲ್: ಸಂಘ ಸಂಸ್ಥೆಗಳು ಪ್ರಚಾರಕ್ಕೆ ಸೀಮಿತವಾಗದೆ ಸಮಾಜಸೇವೆಯ ಮುಖಾಂತರ ಭವ್ಯ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಮಾತೃಭೂಮಿ ಪ್ರತಿಷ್ಠಾನದ ಸಂಚಾಲಕ ಹಾಗೂ ಮಾತೃಭೂಮಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ದೇವಸ್ಯ ಕರೆ ನಿಡಿದ್ದಾರೆ.
ಅವರು ಭಾನುವಾರ ಕಲಾಶ್ರೀ ಮಿತ್ರಬಳಗ, ಮಹಿಳಾ ಬಳಗ ಮತ್ತು ಮಾತೃಭೂಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಬಿಜೆಪಿ ಕರಿಯಂಗಳ ಗ್ರಾಮ ಸಮಿತಿ ಇದರ ಸಹಯೋಗದಿಂದ ನಿರ್ಮಾಣವಾದ ನೂತನ ಮನೆ ಹಸ್ತಾಂತರವನ್ನು ಪುಂಚಮೆ ಸರೋಜಿನಿ ಕೊಟ್ಟಾರಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಅನೇಕ ಸಂಘಸಂಸ್ಥೆಗಳು ಸಮಾಜ ಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಗ್ರಾಮೀಣ ಭಾಗದ ಬಡವರ ಸೇವೆಯನ್ನು ಮಾಡಬೇಕು ಎಂದ ಅವರು, ಕೇವಲ ಸತ್ಯನಾರಾಯಣ ಪೂಜೆಗೆ ಸೀಮಿತಗೊಳ್ಳದೆ ಬಡ ಮಹಿಳೆಗೆ ಮನೆ ನಿರ್ಮಾಣ ಮಾಡಿಕೊಡುವಂತಹ ಕಾರ್ಯ ಶ್ಲಾಘಿಸಿದರು.
ಈ ವೇಳೆ ಕಲಾಶ್ರೀಮಿತ್ರ ಬಳಗದ ವತಿಯಿಂದ ಸರಕಾರಿ ಹಿರಿಯ ಜಿಲ್ಲಾ ಪಂಚಾಯತಿ ಉನ್ನತಿ ಪರಿಸಿತ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್ ಇಲ್ಲಿಯ ಶಾಲೆಯ ಪಿಟೋಪಕರಣಕ್ಕೆ ಸಹಾಯಧನ ನೀಡಲಾಯಿತು. ಅಲ್ಲದೆ, ಗುತ್ತಿಗೆದಾರ ಸುನೀಲ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜೇಶ್ ನಾ ಕ್ ಉಳಿಪಾಡಿಗುತ್ತು, ತಾಲೂಕು ಪಂ ಸದಸ್ಯ ಯಶವಂತ ಕೋಟ್ಯಾನ್, ಕರಿಯಂಗಳ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲ ಬಂಗೇರಾ, ಮಾತೃಭೂಮಿ ಪ್ರತಿಷ್ಠಾನದ ಸಂಚಾಲಕರಾದ ಪ್ರವೀಣ್ ದೇವಯ್ಯ ಮಡಿಕೇರಿ ಎ.ಎಂ.ಆರ್ ಪವರ್ ಪ್ರೊಜೆಕ್ಟ್ ಶಂಭೂರು, ಆದರ್ಶ ಶೆಟ್ಟಿ, ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ಮತ್ತು ಕಲಾಶ್ರೀ ಮಿತ್ರ ಬಳಗದ ಅಧ್ಯಕ್ಷ ಶಿವಪ್ರಸಾದ್ ಆಯೆರೆಮಾರ್ ಉಪಸ್ಥಿತರಿದ್ದರು.
ದೇವ್ ದಾಸ್ ಆಯೆರೆಮಾರ್ ಕಾರ್ಯಕ್ರಮ ನಿರೂಪಿಸಿದರೆ, ಪ್ರಣಾಮ್ ಶೆಟ್ಟಿ ವಂದಿಸಿದರು.










