24vpAddoor

ಅಡ್ಡೂರು: ಶಿಕ್ಷಕರ ಪಾಠದ ಶೈಲಿ, ಪೋಷಕರು ಮಕ್ಕಳನ್ನು ತರಬೇತುಗೊಳಿಸುವ ರೀತಿ ಬದಲಾವಣೆಯಾಗದಿದ್ದಲ್ಲಿ ಖಾಸಗಿ ಅಥವಾ ಸರಕಾರಿ ಶಾಲೆಗಳಿಗೆ ಉಳಿಗಾಲವಿಲ್ಲ ಎಂದು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸರಕಾರಿ ಶಾಲೆಯ 50ನೇ ಸಂಭ್ರಮಾಚರಣೆ ಪ್ರಯುಕ್ತ ಶಾಲಾಭಿವೃದ್ಧಿ -ಮೇಲುಸ್ತುವಾರಿ ಸಮಿತಿ, ಹಿತರಕ್ಷಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ “ಸುವರ್ಣ ಮಹೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.24-03

ಈ ಶಾಲೆಯನ್ನು ಉಳಿಸಲು ಪ್ರತಿಯೊಬ್ಬರು ಪ್ರತಿಜ್ಞೆ ಕೈಗೊಳ್ಳಲು ಮುಂದಾಗಬೇಕು. ಒಂದು ವೇಳೆ ಆತನಲ್ಲಿ ಶಾಲೆಗೆ ಏನೇ ಕೊಡಲು ಸಾಧ್ಯವಾಗದಿದ್ದಲ್ಲಿ, ಆತನು ಮಾನಸಿ, ದೈಹಿಕವಾಗಿ ಶ್ರಮ ನೀಡಿದರೆ ಖಂಡಿತ ಶಾಲೆಯನ್ನು ಅಭಿವೃದ್ಧಿಪಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಶಿಕ್ಷಣ ಎಂದರೆ ಮಕ್ಕಳ ವರ್ತನೆ ತಿದ್ದಿ, ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಎಂದರ್ಥ. ಶಾಲೆಯಲ್ಲಿ ಒದಗಿಸುವ ಸೌಲಭ್ಯಗಳು ಪೂರಕವಾಗಿದ್ದಾಗ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.24-02

ಪ್ರಸ್ತುತ ಕಾಲಘಟ್ಟದಲ್ಲಿ ಸರಕಾರಿ ಶಾಲೆಯನ್ನು ಉಳಿಸುವುದು ಊರಿನ ಸಂಸ್ಕೃತಿಯನ್ನು ಉಳಿಸಿದಂತೆ. ಒಂದು ವೇಳೆ  ಆ ಶಾಲೆ ಮುಚ್ಚಿ ಹೋದರೆ ನಿಮ್ಮ ಮತ್ತು ಹಿರಿಯ ನಡುವಿನ ಸಂಬಂಧದ ಕೊಂಡಿ ಕಳಚಿಕೊಂಡತೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್, ಹಳೆ ವಿದ್ಯಾರ್ಥಿ, ಶಾಲಾ ಮೇಲುಸ್ತುವಾರಿ ಸಮಿತಿ ವಿವಿಧ ಸಂಘ-ಸಂಸ್ಥೆಗಳ ಸಹಕಾರಗಳೊಂದಿಗೆ  ಶಾಲಾಭಿವೃದ್ಧಿ ಪಡಿಸುವುದರ ಜತೆ ಮಕ್ಕಳ ಗಣತಿ ಹೆಚ್ಚಿಸಲು ನಾವು ಪ್ರಯತ್ನಪಡುತ್ತಿದ್ದು, ಇದಕ್ಕಾಗಿ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.24-05

ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಅಹ್ಮದ್ ಬಾವಾ ಮಾತನಾಡಿ, ನಮ್ಮ ಶಾಲೆಯನ್ನು ಉಳಿಸಲು ಮುಂದಾದರೆ ಅದು ಗ್ರಾಮದ ಗೌರವನ್ನು ಉಳಿಸಿ, ಬೆಳಸಿದಂತೆ. ಇಲ್ಲಿ ಪ್ರಾಥಮಿಕ ಶಿಕ್ಷಣವಿದ್ದರು, ಗ್ರಾಮಸ್ಥರು ತಮ್ಮ ಮಕ್ಕಳನ್ನು ದೂರದ ಖಾಸಗಿ ಶಾಲೆಗೆ ಕಳುಹಿಸುತ್ತಿರುವುದು ಶೋಚಕ ಸಂಗತಿ ಎಂದು ಬೇಸರ ವ್ಯಕ್ತಡಿಸಿದರು.24-2

24-01ಈ ವೇಳೆ ನಿವೃತ್ತ ಮುಖ್ಯೋಪಾಧ್ಯಯ ವಿಷ್ಣು ಮೂರ್ತಿ ಪೊಳಲಿ, ನಿವೃತ್ತ ಶಿಕ್ಷಕಿ ಗಂಗೂ ಟೀಚರ್, ಶಿಕ್ಷಕಿ ಶಕುಂತಲ, ಸಹ ಶಿಕ್ಷಕಿ ಸುಕಣ್ಯ, ದೈಹಿಕ ಶಿಕ್ಷಕಿ ಹೀಲ್ಡಾ ವೇಗಸ್, ಹರಿರಾವ್ ಕೃಕಂಬ, ಗುರುಪುರ ಗ್ರಾ.ಪಂ. ಅಧ್ಯಕ್ಷೆ ರುಕಿಯಾ, ಎ.ಕೆ.ರಿಯಾಝ್, ತಾ.ಪಂ.ಸದಸ್ಯ ಸಚಿನ್ ಅಡಪ, ಎ.ಕೆ.ಜಬ್ಬಾರ್ ಕೆಳಗಿನಕೆರೆ, ಟಿ.ಅಹ್ಮದ್ ಬಾವಾ, ಎ.ಕೆ.ರಿಯಾಝ್, ಸಿದ್ದೀಕ್, ಧನಂಜಯ ಗಂಧಾಡಿ, ಹಮ್ಮಬ್ಬ ರೈಫಲ್ ಡಾ.ಇ.ಕೆ.ಸಿದ್ದೀಕ್ ಅವರನ್ನು ಸನ್ಮಾನಿಸಲಾಯಿತು.

24-1

1

6

2

3

4

6 7

8ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ನಿವೃತ್ತ ಶಿಕ್ಷಕ ಕಮಲಾಕ್ಷ ಭಟ್ ಮಾತನಾಡಿದರು. ಎ.ಕೆ.ಹಾರೀಸ್, ಸಾದೀಕ್, ಗುರುಪುರ ಗ್ರಾ.ಪಂ. ಉಪಾಧ್ಯಕ್ಷ ಜಿ.ಎಂ.ಉದಯ್ ಭಟ್, ಗ್ರಾ.ಪಂ.ಸದಸ್ಯ ಜಲೀಲ್, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮತ್ತಿತರು ಭಾಗವಹಿಸಿದ್ದರು.

ಫಾರೂಕು ಕೆಳಗಿನ ಕೆರೆ ಸ್ವಾಗತಿಸಿ, ಅಸ್ತಾರ್ ಅಡ್ಡೂರು ಕಾರ್ಯಕ್ರಮವನ್ನು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *