ಸುದ್ದಿ9ಮಂಗಳೂರು: ಕಾಂಗ್ರೆಸ್ ಬಣ ರಾಜಕೀಯದಿಂದ ಮಹಾನಗರಪಾಲಿಕಾ ಆಯುಕ್ತರ ವಗರ್ಾವಣೆಯ ಗೊಂದಲವು ಕಳೆದೊಂದು ತಿಂಗಳಿಂದ ಸೃಷ್ಟಿಯಾಗಿದ್ದು, ಮನಪಾ ಆಡಳಿತಕ್ಕೆ ತೀವ್ರ ಹಿನ್ನಡೆಯಾಗಿದ್ದು, ಜನಸಾಮಾನ್ಯರಿಗೆ ಅತೀವ ತೊಂದರೆಯುಂಟಾಗಿದೆ. ಈ ಹಿಂದೆ ಹಲವು ಬಾರಿ ಮನಪಾ ಮಹಾಪೌರರನ್ನು ಮಾಧ್ಯಮದ ಮುಖೇನ ಹಾಗೂ ಮೌಖಿಕವಾಗಿ ಗೊಂದಲ ನಿವಾರಣೆಯ ಬಗ್ಗೆ ಪ್ರಸ್ತಾಪಿಸಿದ್ದರೂ ಯಾವುದೇ ರೀತಿಯ ಪರಿಹಾರ ಕಂಡುಬಂದಿಲ್ಲ. ಕಳೆದ ತಿಂಗಳು ಜುಲಾಯಿ 16 ರಂದು ಸರಕಾರದಿಂದ ಹೊಸದಾಗಿ ನೇಮಕವಾದ ಆಯುಕ್ತರಾದ ಪ್ರಸನ್ನರವರು ಈ ದಿನದವರೆಗೂ 2-3 ದಿನಗಳ ರಜೆಗಳನ್ನು ಮುಂದುವರಿಸುತ್ತಾ ಸರಿಸುಮಾರು ಒಂದು ತಿಂಗಳು ಸಮೀಪಿಸಿದ್ದು, ಮಂಗಳೂರು ಮನಪಾ ಆಯುಕ್ತರ ಕೊಠಡಿ ಖಾಲಿಯಾಗಿಯೇ ಇದೆ. ಮಹಾಪೌರರು ತಕ್ಷಣ, ಹೊಸದಾಗಿ ನೇಮಕಗೊಂಡ ಪ್ರಸನ್ನರವರನ್ನು ಆಯುಕ್ತರ ಜವಾಬ್ದಾರಿಯನ್ನು ವಹಿಸುವರೇ ಸೂಚಿಸುವುದು ಅಥವಾ ಮನಪಾದ ಹಿರಿಯ ಅಧಿಕಾರಿಯವರಿಗೆ ಪ್ರಭಾರ ಜವಾಬ್ದಾರಿಯನ್ನು (ಅಖಿಅ) ಹಸ್ತಾಂತರಿಸಿ ಪ್ರಸನ್ನರವರನ್ನು ದೀರ್ಘಕಾಲೀನ ರಜೆಯಲ್ಲಿ ತೆರಳುವರೇ ಸೂಚನೆಯನ್ನು ನೀಡಿ ಮನಪಾದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರಸ್ತುತ ವಿತ್ತೀಯ ನಿರ್ವಹಣೆಯ ತೊಡಕನ್ನು ನಿವಾರಿಸಿಕೊಳ್ಳಬೇಕಾಗಿ ಮನಪಾ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *