ಸುದ್ದಿ9 ಕೈಕಂಬ: ಸುರತ್ಕಲ್ ನ ಬಸ್ ನಲ್ಲಿ ಪಿಕ್ ಪಾಕೆಟ್ ಮಾಡಲು ಯತ್ನಿಸಿದ ಪಿಕ್ ಪಾಕೆಟ್ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರಗೊಪ್ಪಿಸಿದರೂ ಪೊಲೀಸರು ಮಾತ್ರ ಆತನನ್ನು ಮನೆಗೆ ಕಳಿಸಿದ ಪ್ರಸಂಗ ನಡೆದಿದೆ.
ಸುರತ್ಕಲ್ ನ ಬಸ್ ಒಂದಲ್ಲಿ ವ್ಯಕ್ತಿಯೊಬ್ಬರ ಕಿಸೆಗೆ ಕೈ ಹಾಕಿದ ಕಳ್ಳ ಅದನ ನು ಹಿಡಿಯಲು ಯತ್ನಿಸಿದ. ಆಗ ಸಹಪ್ರಯಾಣಿಕರು ಅವನನ್ನು ಹಿಡಿಯಲು ಯತ್ನಿಸಿದಾಗ ಆತ ಸ್ಥಳದಿಂದ ತಪ್ಪಿಸಿ ಪೊದೆಯಲ್ಲಿ ಅಡಗಿ ಕೂತ ಎನ್ನಲಾಗಿದೆ. ಆಗ ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿದು ಚೆನ್ನಾಗಿ ತದಕಿ ಪೊಲೀಸರಿಗೊಪ್ಪಿಸಿದರೆ ಪೊಲೀಸರು ಮಾತ್ರ ಆತನನ್ನು ಹಾಗೆಯೇ ಬಿಟ್ಟು ಮನೆಗೆ ಕಳಿಸಿದ್ದಾರೆ.
ಈತನ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ, ಕೇಳಿದಾಗ ಒಮ್ಮೆ ಕಿನ್ನಿಗೋಳಿ ಅಂದರೆ ಇನ್ನೊಮ್ಮೆ ಕೃಷ್ಣಾಪುರ ಅನ್ನುತ್ತಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈತನ ಕಿಸೆಯಲ್ಲಿ ಸಾಕಷ್ಟು ಹಣವಿರುವುದು ಕುತೂಹಲಕ್ಕೆ ಕಾರಣವಾಗಿದೆ
