ಶಿಶು ಮಂದಿರದಲ್ಲಿ ಯೋಗ ಪ್ರಾಣ ವಿದ್ಯಾ ಶಿಬಿರ
ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪೂರ್ಣ ಕಾಲಿಕ ಸೇವೆಯಲ್ಲಿದ್ದು, ಹಿಂದೂ ಸೇವಾ ಪ್ರತಿಷ್ಠಾಪೆಣೆಗೆ ಕಾರಣಕರ್ತರಾದ ಅಜೀತ್ ಜೀ ಪುಣ್ಯಸ್ಮರಣೆಯನ್ನು ಸೇವ ದಿನವನ್ನಾಗಿ ಆಚರಿಸಿಕೊಂಡು ಬರುವ ಹಿನ್ನೆಲೆಯಲ್ಲಿ ದ.17ರಂದು ಇಲ್ಲಿನ ವಿವೇಕಾನಂದ ಮಾದರಿ ಶಿಶು ಮಂದಿರದಲ್ಲಿ ಯೋಗ ಪ್ರಾಣ ವಿದ್ಯಾ ಕುರಿತು ಮಾಹಿತಿ ಮತ್ತು ಉಚಿತ ಚಿಕಿತ್ಸಾ ಶಿಬಿರ ನಡೆಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನ್ಯಾಯವಾದಿ ಶಿವಪ್ರಸಾದ್ರವರು ಕಾರ್ಯಕ್ರಮ ಉದ್ಘಾಟಿಸಿ, ಭಾರತ್ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಯೋಗ ಪ್ರಾಣ ವಿದ್ಯಾ ಚಿಕಿತ್ಸೆಯ ತರಬೇತುದಾರ ರಾಮಗೋಪಾಲ್ರವರು ಮಾಹಿತಿ ಕಾರ್ಯಕ್ರಮ ನಡೆಸಿದರು. ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರವಿನಾರಾಯಣ್ ಸ್ವಾಗತಿಸಿದರು.

