ಪುತ್ತೂರು: ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ಶಾಲಾ ನಾಯಕ ಅಭಿಷೇಕ್‍ರವರ ಅಧ್ಯಕ್ಷತೆಯಲ್ಲಿ ನಡೆಯಿತು. 1ನೇ ತರಗತಿಯ ವಿದ್ಯಾರ್ಥಿ ರೋಶನ್ ಡಿ’ಸೋಜರವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಪುಟಾಣಿಗಳು ಮಕ್ಕಳ ಹಬ್ಬದ ಬಗ್ಗೆ ಮಾತನಾಡಿದರು.7e38d4a7-bdca-4bfd-9ccf-fbeb60d51307

ಕೊಡುಗೈ ದಾನಿಗಳೂ, ಪ್ರಗತಿಪರ ಕೃಷಿಕರೂ ಆಗಿದ್ದು ದ.ಕ. ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿರುವ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿರವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಯಶೋದಾ ಎನ್.ಎಂ.ರವರು ಸನ್ಮಾನಪತ್ರ ವಾಚಿಸಿದರು. ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಕಂಬಳದಡ್ಡರವರು ಸನ್ಮಾನ ನೆರವೇರಿಸಿದರು. ಎಸ್‍ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ, ಬಾಲಚಂದ್ರ ಗೌಡ ದೇವಸ್ಯ, ಗ್ರಾ.ಪಂ. ಸದಸ್ಯೆ ಭವ್ಯಾ ವಿ. ಶೆಟ್ಟಿ, ಸ್ಥಳೀಯರಾದ ಪದ್ಮನಾಭ ಶೆಟ್ಟಿ ರೆಂಜಾಜೆ ಶುಭ ಹಾರೈಸಿದರು.

8ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವೀಣಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೀಲಾಧರ ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕಿ ಜಯಂತಿ ಎಂ, ತ್ರಿವೇಣಿ, ಭಾನುಶ್ರೀ ಅಂದ್ರಿಗೇರು, ಸುರಕ್ಷಾ ಡಿ.ಬಿ. ವಿವಿಧ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಮಕ್ಕಳ ಹಬ್ಬ ಮುಕ್ತಾಯ ಮಾಡಲಾಯಿತು.

By suddi9

Leave a Reply

Your email address will not be published. Required fields are marked *