ನೇರಳಕಟ್ಟೆ: ಎಸ್ಕೆಎಸ್ಸೆಸೆಫ್ ಕೊಡಾಜೆ ಹಾಗೂ ನೇರಳಕಟ್ಟೆ ಯುನಿಟ್ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ಪಂತಡ್ಕದ ಅಬ್ಲುಲ್ ರಹ್ಮಾನ್ ಫೈಝಿ ಮನೆಯಲ್ಲಿ ನಡೆಯಿತು.
ಯುನಿಟ್ ನ ನೂತನ ಅಧ್ಯಕ್ಷರಾಗಿ ಇಬ್ಬಿ ಹಾಜಿ ಪಂತಡ್ಕ, ಉಪಾಧ್ಯಕ್ಷರಾಗಿ ಆಸೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ನೇರಳಕಟ್ಟೆ, ಕೆಲಸ ಕಾರ್ಯದರ್ಶಿಯಾಗಿ ಕಬೀರ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ನೆಡ್ಯಾಲ್, ವಿಕಾಯರಾಗಿ ಉಸ್ಮಾನ್ ನೆಡ್ಯಾಲ್, ಸಾಚಾರಿಯಾಗಿ ಸಾಹುಲ್ ಹಮೀದ್ ನೇರಳಕಟ್ಟೆ, ಟ್ರಂಡ್ ರಾಗಿ ಸವಾದ್ ನೇರಳಕಟ್ಟೆ, ಸರ್ಗಾಲಯರಾಗಿ ಜುನೈದ್ ನೇರಳಕಟ್ಟೆ, ಇಬಾದ್ ರಾಗಿ ಝಕರಿಯ ಪಂತಡ್ಕ, ಕೌನ್ಸಿಲರ್ ರಾಗಿ ಅಬ್ದುಲ್ ರಹ್ಮಾನ್ ಫೈಝಿ ಹಾಗೂ ಅಬ್ದುಲ್ ಖಾದರ್ ಹಾಗೂ ಮನ್ಸೂರ್ ಅವರನ್ನು ಇದೇ ವೇಳೆ ಆಯ್ಕೆಗೊಳಿಸಲಾಯಿತು.
