k mahamad

ಚುಕ್ಕಮಗಳೂರು: ಡಿ.26ರಂದು ಮಂಗಳೂರಿನ ಪುರಭವನದಲ್ಲಿ ‘ಬ್ಯಾರಿ ಸಾಂಸ್ಕೃತಿಕ ಸಂಭ್ರಮ’ ಆಯೋಜಿಸಲಾಗಿದ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ.ಮೊಹಮ್ಮದ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಥ ರೈ ಉದ್ಘಾಟಿಸಲಿದ್ದು, ಸಚಿವರಾದ ಯು.ಟಿ.ಖಾದರ್, ಉಮಾಶ್ರೀ, ಆರ್.ರೋಷನ್ ಬೇಗ್, ಹಾಗೂ ಶಾಸಕ ಮೊಯ್ದಿನ್ ಬಾವಾ ಮತ್ತಿತರರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

2018ರ ಫೆ.2ರಂದು ಪೈ ಮಂಟಪದಲ್ಲಿ ಅಲ್ ಪಫಾ ಚಾರಿಟೇಬಲ್ ಹಾಗೂ ಚಿಕ್ಕಮಗಳೂರುಉ ಜಿಲ್ಲಾ ಬ್ಯಾರಿಗಳ ಒಕ್ಕೂಟದಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ವಧು-ವರರು ಹೆಸರು ನೋಂದಾಯಿಸಕೊಳ್ಳಬಹುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

By Suddi9

Leave a Reply

Your email address will not be published. Required fields are marked *