ಬಾಗಲಕೋಟೆ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಅಲೆ ಕುಗ್ಗುತ್ತಿದೆ ಎನ್ನುವುದಕ್ಕೆ ಗುಜರಾತ್ ಚುನಾವಣೆ ಸಾಕ್ಷಿಯಾಗಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ನಗರದ ಜಮಖಂಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್‌ಗೆ ಸೇರಲು ಸಿದ್ಧರಿದ್ದು, ನಮ್ಮ ಸಂಪರ್ಕದಲ್ಲಿ ಇದ್ದಾರೆ. ಗುಜಾರಾತ್‌ನಲ್ಲಿ ನಿಜವಾಗಿ ಕಾಂಗ್ರೆಸ್ ಗೆದ್ದಿದೆ, ಬಿಜೆಪಿ ಸೋತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಹಾದಾಯಿ ವಿವಾದ ಪರಿಹರಿಸಲು ಅಂದು ಆಗಲ್ಲ ಅಂದಿದ್ದ ಪ್ರಧಾನಿ ಮೋದಿಯವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮಹಾದಾಯಿ ವಿವಾದ ಬಗೆ ಹರಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

