696969666

ಮಂಗಳೂರು: ಜಿಲ್ಲೆಯ ಗುರುಪುರ ಕೈಕಂಬದಲ್ಲಿ ಇತ್ತೀಚೆಗೆ ಮಸಲ್ ಹಂಟ್ ಕ್ಲಾಸಿಕಲ್ ಜಿಮ್ ಮಾಲಕ ನವೀನ್ ಗ್ರಾಶನ್ ಅವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಹವ್ಯಾಸಿ ದೇಹ ದಾರ್ಢ್ಯೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದ ರಮೀಝ್ ಅವರು ಇದೀಗ ಕೋಲಾರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ನಗರದ ಕೂಳೂರಿನ ಮುಮ್ತಾಝ್ ಹಾಗೂ ಯಾಕೂಬ್ ದಂಪತಿಗಳ ಪುತ್ರ ರಮೀಝ್, 2014ರಲ್ಲಿ ನಡೆದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ 2 ಚಿನ್ನದ ಪದಕ ಗಳಿಸಿದ್ದರು. ಅಲ್ಲದೆ, 7 ಬಾರಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಆಗಿ ಹೊರಮ್ಮಿದ್ದಾರೆ.

By Suddi9

Leave a Reply

Your email address will not be published. Required fields are marked *