modi19

ಮಂಗಳೂರು: ಪ್ರಾಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಇಂದು ರಾತ್ರಿ ಜಿಲ್ಲೆಗೆ ಆಗಮಿಸಿ ನಗರದ ಕದ್ರಿ ಹಿಲ್ಸ್ ನಲ್ಲಿರುವ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದು, ಸುತ್ತಮುತ್ತ ಬಿಗಿ ಪೊಲೀಸ್  ಬಂದೋ ಬಸ್ತ್  ಕೈಗೊಳ್ಳಲಾಗಿದೆ.

ಮೋದಿಯವರು ಇಂದು ರಾತ್ರಿ 11.45ಕ್ಕೆ ವಿಶೇಷ ವಿಮಾನದಲ್ಲಿ ಬಜ್ಪೆ ವಿಮಾನ ನಿಲ್ದಾನಕ್ಕೆ ಆಗಮಿಸಿ, ನಗರದ ಕದ್ರಿ ಹಿಲ್ಸ್ ನಲ್ಲಿರುವ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿ, ಡಿ.19ರ ಬೆಳಗ್ಗೆ 8.45ಕ್ಕೆ ವಿಮಾನ ನಿಲ್ದಾನಕ್ಕೆ ತೆರಲಿ ಹೆಲಿಕಫ್ಟರ್ ಮೂಲಕ ಲಕ್ಷದ್ವೀಪಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕೀಟ್ ಹೌಸ್ ಪರಿಶೀಲನೆ ನಡೆಸಲು ಡಿಜಿಪಿ ನೀಲಮಣಿ, ಈಪಿಜಿ ಹೆಮಂತ್ ನಿಂಬಲ್ಕರ್, ಕಮಿಷರ ಟಿ.ಆರ್ ಸುರೇಶ್, ಎಸ್ಪಿ ಸುಧೀರ್ ಮುಕಾರ್ ರೆಡ್ಡಿ ಭೇಟಿ ನೀಡಿದ್ದಾರೆ.

ಒಖಿ ಚಮಡಮಾರುತದಿಂದ ಅಲ್ಲಿನ ಜನ ಜೀವ ಅಸ್ತವ್ಯಸ್ತಗೊಂಡಿದ್ದು, ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೋದಿ ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿಯವರ ವಿಶೇಷ ಭದ್ರತಾದಿಕಾರಿಗಳ ಸೂಚನೆ ಮೇರೆಗೆ ನಗರದ ಹಲವೆಡೆ ಹೆಚ್ಚನ ಕಮಾಂಡೊ ಹಾಗೂ ಪೊಲೀಸರನ್ನು ನಿಯೋಜಿಸಿದ್ದು, ಸರ್ಕೀಟ್ ಹೌಸ್ ಸ್ಥಳಕ್ಕೆ ವಿಶೇಷ ಬಾಂಬ್ ದಳ ಪತ್ತೆ ಹಾಗೂ ಶ್ವಾನ ದಳವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಕಣ್ಗಾವಲಿಗೆ ಸುಮಾರು 60ಸಿಸಿ ಕೆಮರಾಗಳನ್ನು ಅಲವಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಹಿಚ್ಚಿನ ಭದ್ರತೆಗೆಗಾಗಿ ಸರ್ಕೀಟ್ ಹೌಸಿನ ಭಾಗದಲ್ಲಿರುವ 9 ಬಾರ್ ಹಾಗೂ ರೆಸ್ಟೋರೆಮಟ್ ಗಲನ್ನು ಮುಚ್ಚಿಸಲಾಗಿದ್ದು, ಈ ಭಾಗದ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

 

By suddi9

Leave a Reply

Your email address will not be published. Required fields are marked *