ಮಂಗಳೂರು: ಇಂದು ಗುಜರಾತ್, ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಗ್ಗೆ ರಾಜ್ಯದ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ತಮ್ಮ ಪೇಸ್ಬುಕ್ ನಲ್ಲಿ ಸ್ಟೇಟಸ್ ವೊಂದನ್ನು ಹಂಚಿಕೊಂಡಿದ್ದಾರೆ.
“ಗೆದ್ದರೆ ಗೆದ್ದ ಖುಷಿಯಲ್ಲಿ, ಸೋತರೆ ಸೋತ ದುಖಃದಲ್ಲಿ ತಿನ್ನುವ ಎಂದು ಎರಡು ಕಿಲೋ ಕಾಣೆ ಮೀನು ಹಾಗೂ ಅಡಿಕೆ ವೈನ್ ತಂದಿಟ್ಟುಕೊಂಡಿದ್ದೇನೆ. ಮೀನು ತಿಂದ ಬಿಸಾಡಿದ ಮುಳ್ಳುಗಳಿಗೆ ಕಾಯುತ್ತಿರುವವರನ್ನು ಯಾಕೆ ನಿರಾಶೆ ಪಡಿಸಬೆಕಲ್ವಾ? ಸೋತು ಗೆದ್ದರೆ ಸ್ವಲ್ಪ ಖುಷಿ, ಸ್ವಲ್ಪ ದುಖಃಕ್ಕೆ ಇರಲಿ ಎಂದು ಮಡಿಕೇರಿ ಗೆಳೆಯರು ಕೊಟ್ಟಿರುವ ಸಿಹಿ-ಒಗರಿನ ಅಡಿಕೆ ವೈನ್ ಕೂಡಾ ಇಟ್ಟುಕೊಂಡಿದ್ದೇನೆ” ಎಂದು ಅಮೀನ್ ಮಟ್ಟು ಖಾರವಾಗಿ ಅಭಿಪ್ರಾಯವನ್ನು ತಿಳಿಸಿದ್ದಾರೆ.

